ಸ್ವರ್ಣವಲ್ಲಿ ಶ್ರೀಗಳ ಕರೆಗೆ ಇಡೀ ಜಿಲ್ಲೆಯೇ ಸಾಥ್ ನೀಡಲಿದೆ: ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ

Jan 11, 2026 - 17:51
 0  51
ಸ್ವರ್ಣವಲ್ಲಿ ಶ್ರೀಗಳ ಕರೆಗೆ ಇಡೀ ಜಿಲ್ಲೆಯೇ ಸಾಥ್ ನೀಡಲಿದೆ: ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ

ಆಪ್ತ ನ್ಯೂಸ್‌ ಶಿರಸಿ:

ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಗಳ ನೇತೃತ್ವಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಅವರು ಹೋರಾಟದ ಕರೆ ನೀಡಿದರೆ ಇಡೀ ಜಿಲ್ಲೆಯ ಜನತೆ ಪಕ್ಷಾತೀತವಾಗಿ ಕೈಜೋಡಿಸಲಿದ್ದಾರೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಮಹಾಸ್ವಾಮೀಜಿಗಳು ಹೇಳಿದ್ದಾರೆ.

ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹೋರಾಟದ ಸ್ವರೂಪದ ಬಗ್ಗೆ ಸ್ಪಷ್ಟನೆ ನೀಡಿದರು. "ಇದು ಸಂಪೂರ್ಣವಾಗಿ ಒಂದು 'ಸಾತ್ವಿಕ ಹೋರಾಟ'ವಾಗಿದೆ. ಇಲ್ಲಿ ಯಾವುದೇ ರೀತಿಯ ಆವೇಶಭರಿತ ಅಥವಾ 'ತಾಮಸ' ಮಾದರಿಯ ಹೋರಾಟದ ಅಗತ್ಯವಿಲ್ಲ. ಶಾಂತಿಯುತವಾಗಿಯೇ ನಮ್ಮ ದನಿಯನ್ನು ಸರ್ಕಾರದ ಕಿವಿಗೆ ಮುಟ್ಟಿಸಬೇಕಿದೆ," ಎಂದು ಅವರು ಪ್ರತಿಪಾದಿಸಿದರು.

ಸ್ವರ್ಣವಲ್ಲಿ ಶ್ರೀಗಳು ಸಮಾಜದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿದ್ದು, ಒಗ್ಗಟ್ಟಿನಿಂದ ಈ ಕಾರ್ಯವನ್ನು ಯಶಸ್ವಿಗೊಳಿಸೋಣ ಎಂದು ಮಹಾಂತ ಶ್ರೀಗಳು ಈ ಸಂದರ್ಭದಲ್ಲಿ ಕರೆ ನೀಡಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0