ಜೊಯಿಡಾದಲ್ಲಿ ಆಹೋರಾತ್ರಿ ಧರಣಿ
ಆಪ್ತ ನ್ಯೂಸ್ ಜೋಯಿಡಾ:
ಕರ್ನಾಟಕ ರೈತ ಪ್ರಾಂತ ಸಂಘ ಜೊಯಿಡಾ ಇವರು ವಿವಿಧ ಬೇಡಿಕೆ ಗಳನ್ನು ಮುಂದಿಟ್ಟು ತಹಶೀಲ್ದಾರ್ ಕಛೇರಿ ಮುಂದೆ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸೋಮವಾರ ಕಿರವತ್ತಿಯಿಂದ 11 ಕಿ.ಮಿ ಪಾದಯಾತ್ರೆ ಮಾಡಿ ತಹಶಿಲ್ದಾರ ಮೂಲಕ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ನೀಡಲಾಯಿತು. ಹಗಲು ರಾತ್ರಿ ನಿರಂತರ ಹೋರಾಟ ಮುಂದುವರಿದಿದೆ.
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷ ಪ್ರೇಮಾನಂದ ವೇಳಿಪ ಮಾತನಾಡಿ ಮೂಲಭೂತ ಸೌಕರ್ಯಕ್ಕೆ ಹೋರಾಟ ಮಾಡುವ ದಿನಗಳು ಬಂದಿದ್ದು ದು:ಖದ ಸಂಗತಿಯಾಗಿದೆ . ಸರ್ಕಾರಕ್ಕೆ ನಾಚಿಕೆ ಆಗಬೇಕು. ಅನೇಕ ಬಾರಿ ಮನವಿ ನೀಡಿದರು ಪ್ರಯೋಜನ ವಾಗಿಲ್ಲ .ಕುಂಡಲ ಬಸ್, ವಾಗೇಲಿ ಡಿಗ್ಗಿ ರಸ್ತೆ, ಬಿಎಸ್ ಎನ್ ಎಲ್ ಟವರಸೇರಿದಂತೆ ಕಾರಟೋಳಿ ನ್ಯಾಯ ಬೇಲೆ ಅಂಗಡಿ ಮತ್ತು ಗಾಂಗೋಡಾ ರಸ್ತೆ, ಆಗಿಲ್ಲ. ಅರಣ್ಯ ಪ್ಯಾಕೇಜ್ ಆಮಿಷ ಬಂದು ಮಾಡಬೇಕು. ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ಸಚಿವರು, ಶಾಸಕರು ಸಮಸ್ಯೆ ಆಲಿಸುತ್ತಿಲ್ಲ ಈ ಬಗ್ಗೆ ಪರಿಶೀಲನೆ ನಡೆಸಿ ಸರಿಯಾಗಿಪರಿಹಾರ ನೀಡುವಂತೆ ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ತಿಲಕ್ ಗೌಡ ಮಾತನಾಡಿ ಜೊಯಿಡಾ ಪ್ರದೇಶ ಸರ್ಕಾರ ಕಡೆಗಣಿಸಿದೆ. ಸ್ವಾತಂತ್ರ್ಯ ನಂತರವೂ ಮೂಲಭೂತ ವ್ಯವಸ್ಥೆ ವಿರುದ್ಧ ಹೋರಾಟ ಅನಿವಾರ್ಯವಾಗಿದೆ, ಮುಂದೆ ಸ್ವಾತಂತ್ರ್ಯ ಮಾದರಿಯಲ್ಲಿ ಹೋರಾಟ ಆಗಬೇಕು. ಭೂಮಿ ಹಕ್ಕು ಸಿಗಬೇಕು ಎಂದರು.
ಶ್ಯಾಮನಾಥ ನಾಯ್ಕ ಜಿಲ್ಲಾ ಕಾರ್ಯದರ್ಶಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೂಲ ಭೂತ ಸೌಲಭ್ಯ ನೀಡಬೇಕು. ಕತ್ತಲೆಯಲ್ಲಿ ಗ್ರಾಮಸ್ಥರು ನಿರಂತರ ಹೋರಾಟ ಮಾಡುತ್ತಿದ್ದು ಸಮಸ್ಯೆ ಸ್ಥಳದಲ್ಲಿ ಯೇ ಪರಿಹಾರ ಆಗಬೇಕು ಎಂದರು.ಡಿ ಶ್ಯಾಮಸನ, ಜಿಲ್ಲಾ ಕಾರ್ಯದರ್ಶಿ ಮಾತನಾಡಿ ಇಲ್ಲಿ ಹೋರಾಟಕ್ಕೆ ನ್ಯಾಯ ಸಿಗದಿದ್ದರೆ ಮುಂದೆ ದೊಡ್ಡ ಪ್ರಮಾಣದಲ್ಲಿ ಹೋರಾಟ ರೂಪಿಸಬೇಕು ಎಂದರು.
ಈ ಸಂದರ್ಭದಲ್ಲಿ ,ದಿವ್ಯಾ ನಾಯ್ಕ ನಾಗೊಡಾದ ದಿಗಂಬರ ದೇಸಾಯಿ ಪ್ರಮುಖರಾದ ವಿಕಾಸ ವೇಳಿಪ, ಸಂತೋಷ ವೇಳಿಪ, ಜಯಂತ ವೇಳಿಪ, ಮಾಬಳು ಕುಂಡಲಕರ, ಕೃಷ್ಣಾ ಮಿರಾಶಿ, ದಯಾನಂದಕುಮಗಾಳಕಾರರಾಜೇಶ್ ಗಾವಡಾ ಸೇರಿದಂತೆ ನೂರಾರು ಜನರು ಇದ್ದರು
ಇದಕ್ಕು ಮೊದಲು ಕಿರವತ್ತಿಯಿಂದ ಹನ್ನೊಂದು ಕಿ.ಮಿ ಪಾದಯಾತ್ರೆಯಲ್ಲಿ ಬಂದ ಪ್ರತಿಭಟನಾಕಾರರು ತಹಶಿಲ್ದಾರ ಕಚೇರಿಮುಂದೆ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಬಂದು ಸಮಸ್ಯೆ ಗೆ ಉತ್ತರ ನೀಡುವ ಮೂಲಕ ಪರಿಹಾರ ಕಂಡು ಹಿಡಿಯುವ ಅಗತ್ಯ ಇದೆ. ತಹಶಿಲ್ದಾರ ಮಂಜುನಾಥ ಮುನ್ನಳ್ಳಿ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.ಅಗತ್ಯ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



