ಇಂದು ಕದ್ರಾ ಮಹಾಮಾಯಾ ಜಾತ್ರಾ ಮಹೋತ್ಸವ

Oct 26, 2025 - 09:37
 0  32
ಇಂದು ಕದ್ರಾ ಮಹಾಮಾಯಾ ಜಾತ್ರಾ ಮಹೋತ್ಸವ

ಆಪ್ತ ನ್ಯೂಸ್ ಕದ್ರಾ:

ತಾಲೂಕಿನ ಜಿಲ್ಲೆಯ ಪ್ರಸಿದ್ಧ ಜಾತ್ರೆಯಲ್ಲಿ ಒಂದಾದ ಕದ್ರಾದ ಶ್ರೀ ಮಹಾಮಾಯಾ ಜಾತ್ರಾ ಮಹೋತ್ಸವ ಇಂದು ವಿಜ್ರಂಭಣೆಯಿಂದ ನಡೆಯಲಿದೆ.
ಪಾಂಡವ ಪಂಚಮಿಯ ಭಾನುವಾರ ಶ್ರೀ ಮಹಾಮಾಯಾ ದೇವಿಯು ಇಲ್ಲಿನ ಶಿಂಗೇವಾಡಿಯ ದೇವಾಲಯದಿಂದ ಮೆರವಣಿಗೆಯಲ್ಲಿ ಹೊರಟು ಕದ್ರಾಗೆ ಆಗಮಿಸಿ ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ತಾಲೂಕಿನ ಪ್ರಥಮ ಜಾತ್ರೆಯಾಗಿರುವ ಕದ್ರಾದ ಮಹಾಮಾಯಾ ಜಾತ್ರೆಗೆ ತಾಲೂಕಿನ,ಜಿಲ್ಲೆಯ ಮಾತ್ರವಲ್ಲದೇ ನೆರೆಯ ರಾಜ್ಯಗಳಾದ ಗೋವಾ,ಮಹಾರಾಷ್ಟ್ರಗಳಿಂದ ಭಕ್ತರು ಆಗಮಿಸಿ ಶ್ರೀದೇವಿಯ ದರ್ಶನ ಭಾಗ್ಯ ಪಡೆಯುತ್ತಾರೆ.
ಭಾನುವಾರ ಬೆಳಿಗ್ಗೆಯಿಂದಲೇ ಭಕ್ತರು ಶ್ರೀದೇವಿಯ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತು ತಡರಾತ್ರಿಯವರೆಗೂ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸುತ್ತಾರೆ.ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ.ಪ್ರತಿವರ್ಷ ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0