ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಕಾಳಿ ಬ್ರಿಗೇಡ ಆಗ್ರಹ: ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ದೇಶಪಾಂಡೆ ಸೂಚನೆ

Oct 29, 2025 - 10:48
 0  33
ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಕಾಳಿ ಬ್ರಿಗೇಡ ಆಗ್ರಹ: ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ದೇಶಪಾಂಡೆ ಸೂಚನೆ

ಆಪ್ತ ನ್ಯೂಸ್ ಜೋಯಿಡಾ:

ತಾಲೂಕಾ ಕೆಂದ್ರ ಸ್ಥಾನದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಆಲಿಸಿದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಸಮಸ್ಯೆಗೆ ತಕ್ಷಣ ಸ್ಪಂದಿಸಿ, ಬೆಂಗಳೂರಿನ ಹಿಂದುಗಳಿದ ವರ್ಗಗಳ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಸಚಿವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಸಮಸ್ಯೆ ತಕ್ಷಣ ಬಗೆಹರಿಸುವಂತೆ ಸೂಚಿಸಿದ ಘಟನೆ ನಡೆಯಿತು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಜೋಯಿಡಾದಲ್ಲಿ ಕೆ.ಡಿ.ಪಿ. ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ವತಿಯಿಂದ ಅವರಿಗೆ ಮನವಿ ಸಲ್ಲಿಸಿ, ವಸತಿ ನಿಲಯ ಇಲ್ಲದೇ ಇರುವುದರಿಂದ ಆಗುತ್ತಿರುವ ಸಮಸ್ಯೆಯನ್ನು ವಿವರಿಸಲಾಯಿತು. ಈ ಬಗ್ಗೆ ಸ್ಥಳೀಯ ಮುಖಂಡರು ಧ್ವನಿಗೂಸಿದಾಗ, ಅದನ್ನು ಗಂಭೀರವಾಗಿ ಪರಿಗಣಿಸಿದ ದೇಶಪಾಂಡೆವರು ಈ ಕುರಿತು ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕಾ ಅಧಿಕಾರಿ ಪಾಟೀಲ ಅವರಿಂದ ಮಾಹಿತಿ ಪಡೆದು, ಬೆಂಗಳೂರಿನ ಹಿರಿಯ ಅಧಿಕಾರಿ ಮತ್ತು ಸಚಿವರೋಂದಿಗೆ ಈ ಬಗ್ಗೆ ದೂರವಾಣಿಯಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
ಈ ಬಗ್ಗೆ ತಕ್ಷಣ ಕಾರ್ಯ ಪ್ರವರ್ತರಾದ ಹಿಂದುಗಳಿದ ವರ್ಗಗಳ ವಸತಿ ನಿಲಯದ ಇಲಾಖೆಯ ಬೆಂಗಳೂರಿನ ಹಿರಿಯ ಅಧಿಕಾರಿಗಳು ಜೋಯಿಡಾದ ಡಿಪ್ಲೋಮಾ ಕಾಲೇಜ್‌ನಲ್ಲಿ ಇರುವ ಕಟ್ಟಡದ ಮಾಹಿತಿ ಪಡೆದು, ಅಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಅಡಿಯಲ್ಲಿ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯ ತಕ್ಷಣದಿಂದ ಆರಂಭಿಸಲು ಕಾರ್ಯ ಪ್ರವರ್ತರಾಗುವಂತೆ ತಾಲೂಕಾ ಅಧಿಕಾರಿಗಳಿಗೆ ದೂರುವಾಣಿಯಲ್ಲಿ ಆದೇಶಿಸಿದರು.
ಜೋಯಿಡಾದ ಸೂತ್ತಮೂತ್ತಲಿನ ಭಾಗಗಳಲ್ಲಿ ಸಾಮಾನ್ಯ ವರ್ಗದವರು ಮತ್ತು ಹಿಂದುಳಿದ ವರ್ಗದ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಅವರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಜೋಯಿಡಾದಲ್ಲಿ ಪಿ.ಯು.ಸಿ, ಡಿಪ್ಲೋಮಾ, ಡಿಗ್ರಿ ಕಾಲೇಜಗಳಿಗೆ ಸೇರುತ್ತಾರೆ. ಆದರೆ ಅವುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಜೋಯಿಡಾದಲ್ಲಿ ಮೇಟ್ರಿಕ ನಂತರದ ಬಾಲಕರ ವಸತಿ ನಿಲಯ ಇಲ್ಲದೇ ಇರುವುದರಿಂದ ಅವರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ನಿರಂತರವಾಗಿ ವಂಚಿತರಾಗುತ್ತಿದ್ದರು.
ಹಲವು ವಿದ್ಯಾರ್ಥಿಗಳು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಕಾಲೇಜಿಗೆ ಸರಿಯಾದ ಸಮಯಕ್ಕೆ ಬರಲು ಮತ್ತು ಮರಳಿ ಮನೆಗೆ ಹೋಗಲು ಆಗುತ್ತಿರಲಿಲ್ಲ. ಜೋಯಿಡಾದಲ್ಲಿ ಭಾಡಿಗೆ ಮನೆ ಮಾಡಿ ವಿದ್ಯಾಭ್ಯಾಸ ಮಾಡುವಷ್ಟು ಇಲ್ಲಿನ ಜನರು ಆರ್ಥಿಕವಾಗಿ ಸಬಲರಾಗಿಲ್ಲ. ಇದರಿಂದಾಗಿ ಹಲವರು ತಮ್ಮ ಶಿಕ್ಷಣ ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ. ಅದಕ್ಕಾಗಿ ಇಲ್ಲಿ ತುರ್ತಾಗಿ ಹಿಂದುಳಿದ ವರ್ಗಗಳ ಮೇಟ್ರಿಕ ನಂತರದ ಬಾಲಕರ ವಸತಿ ನಿಲಯದ ಅವಶ್ಯಕತೆಯಿದ್ದು, ಜೋಯಿಡಾದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮಾಡಲು ಮೂಲಭೂತ ಸೌಕರ್ಯಗಳು ಇರುವುದನ್ನು ದೇಶಪಾಂಡೆ ಅವರಿಗೆ ಕಾಳಿ ಬ್ರಿಗೇಡ ವತಿಯಿಂದ ಮತ್ತು ಸ್ಥಳೀಯ ಮುಖಂಡರಾದ ರವಿ ರೇಡ್ಕರ, ವಿನಯ ದೇಸಾಯಿ ಹಾಗೂ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.
ಇಲ್ಲಿಯ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿರುವುದನ್ನು ಮನಗಂಡ ದೇಶಪಾಮಢೆ ಅವರು ಸದ್ರಿ ವಸತಿ ನಿಲಯದಲ್ಲಿ ಸ್ಥಳೀಯ ಪದವಿ, ಪದವಿ ಪೂರ್ವ ಮತ್ತು ಡಿಪ್ಲೋಮಾ ಕಾಲೇಜ್ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ಮೇರೆಗೆ ಅವಕಾಶ ನೀಡಿ, ನಂತರ ಉಳಿದವರಿಗೆ ಅವಕಾಶ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ ಮುಖ್ಯ ಸಂಚಾಲಕ ಸುನೀಲ ದೇಸಾಯಿ, ಮುಖ್ಯ ಸಮಿತಿ ಅಧ್ಯಕ್ಷ ಉಮೇಶ ವೇಳಿಪ, ಕಾರ್ಯದರ್ಶಿ ಸಮೀರ ಮುಜಾವರ, ಮಾಜಿ ಕಾರ್ಯದರ್ಶಿ ಪ್ರಭಾಕರ ನಾಯ್ಕ, ಮಾಜಿ ಅಧ್ಯಕ್ಷರಾದ ಸತೀಶ ನಾಯ್ಕ, ಕಿರಣ ನಾಯ್ಕ, ನಾರಾಯಣ ಹೆಬ್ಬಾರ, ದಿನೇಶ ದೇಸಾಯಿ, ಮುಂತಾದ ಕಾಳಿ ಬ್ರಿಗೇಡನ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0