ಯಶಸ್ವಿಯಾಗಿ ನಡೆದ ಕಲ್ಲೇಶ್ವರ ಪ್ರೌಢಶಾಲೆ ಶೈಕ್ಷಣಿಕ ಹಬ್ಬ

Dec 16, 2025 - 22:22
 0  24
ಯಶಸ್ವಿಯಾಗಿ ನಡೆದ ಕಲ್ಲೇಶ್ವರ ಪ್ರೌಢಶಾಲೆ ಶೈಕ್ಷಣಿಕ ಹಬ್ಬ
ಆಪ್ತ ನ್ಯೂಸ್‌ ರಾಮನಗುಳಿ:

ಸರಕಾರಿ ಹಿರಿಯ ಪ್ರಾಥಮಿಕ ಮತ್ತು  ಪ್ರೌಢಶಾಲೆ ಕಲ್ಲೇಶ್ವರ ಇದರ ವಾರ್ಷಿಕ ಶೈಕ್ಷಣಿಕ ಹಬ್ಬ  ಅತ್ಯಂತ ಯಶಸ್ವಿ ಯಾಗಿ ನೆರವೇರಿತು. ಬೆಳಿಗ್ಗೆ ಸಭಾ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರೌಢಶಾಲಾ ಅಧ್ಯಕ್ಷರಾದ ಶ್ರೀ ಶ್ರೀಧರ ಭಟ್ಟ ವಹಿಸಿದ್ದರು.
ನಿವೃತ್ತ ಶಿಕ್ಷಕರಾದ ಜಿ. ಎನ್ ಗಾಂವ್ಕರ್ ರವರು ಸಭೆಯ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ  ಮಾತನಾಡಿ ವಿದ್ಯಾರ್ಥಿಗಳು ಈ ಸಮಯದಲ್ಲಿ ಶ್ರಮಪಟ್ಟು ಏಕಾಗ್ರತೆಯಿಂದ ಓದಿದರೆ ಮುಂದೆ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ. ಪ್ರಾಮಾಣಿಕತೆ ಮತ್ತು ಶಿಸ್ತು ಯಾವತ್ತೂ ನಿಮ್ಮಲ್ಲಿರಲಿ ಅಂತ ಕಿವಿಮಾತು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಕಲ್ಪತರು ಸಂಘದ ನಿರ್ದೇಶಕರಾದ ಶ್ರೀ ಶೇಖರ್ ಗಾಂವ್ಕರ್ ಮಾತನಾಡಿ ಈ ಶೈಕ್ಷಣಿಕ ಹಬ್ಬವನ್ನು ಆಚರಿಸಲು ನಾವೆಲ್ಲರೂ ಸಂತೋಷದಿಂದ ಸಂಭ್ರಮದಿಂದ ಒಂದು ಕುಟುಂಬದವರಂತೆ ಇಲ್ಲಿ ಸೇರಿದ್ದೆವೆ. ಈ ಹಬ್ಬದಿಂದ ಕುಣಿಯುತ್ತಾ ನಲಿಯುತ್ತಾ ಕಲಿಯಬೇಕು, ಕಲಿಯುತ್ತಾ ಬೆಳೆಯಬೇಕು. ತನ್ಮೂಲಕ ಶಾಲೆ ಸಮಾಜ, ದೇಶಕ್ಕೆ ಜವಾಬ್ದಾರಿ ಹೊರುವ ಮತ್ತು ಮೌಲ್ಯಗಳನ್ನು ಪಾಲಿಸುವ ನಾಗರಿಕರಾಗಬೇಕು ಅಂತ ಹಾರೈಸಿದರು.

ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ವಿ ಎಸ್‌ ಭಟ್ಟ ಕಲ್ಲೇಶ್ವರ ಪ್ರಾಸ್ತಾವಿಕ ಮಾತನಾಡಿ ಶಾಲೆಯ ಅಭಿವೃದ್ಧಿ ಗೆ ಸಹಾಯ ಸಹಕಾರ ನೀಡಿದವರನ್ನು ಸ್ಮರಿಸಿ ಶಾಲೆ ನಡೆದು ಬಂದ ಇತಿಹಾಸವನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ವಿನೋದ ಭಟ್ಟ ಅಧ್ಯಕ್ಷರು ಗ್ರಾಂ. ಪಂ. ಡೋಂಗ್ರಿ,
ಪ್ರಕಾಶ ಹೆಗಡೆ ಉದ್ದಿಮೆದಾರರು, ಮೋಹನ ಪಟಗಾರ ಗ್ರಾಂ ಪಂ ಸದಸ್ಯರು ಮಾತನಾಡಿದರು. ರಾಜು ಎನ್ ಹರಿಕಾಂತ ವಕೀಲರು, ಮಂಜುನಾಥ ಸಿದ್ದಿ, ರಾಮಕೃಷ್ಣ ಗಾಂವ್ಕರ ವೇದಿಕೆಯಲ್ಲಿ  ಅಂಗನವಾಡಿಯ ಸ್ಮಿತಾ ಭಟ್ಟ ಇದ್ದರು.
 
ಪ್ರೌಢಶಾಲಾ ಮುಖ್ಯಾಧ್ಯಾಪಕಿ ಪಾರ್ವತಿ ನಾಯಕ  ಸ್ವಾಗತಿಸಿದರು. ಶಿಕ್ಷಕಿಯರಾದ ಅಕ್ಷಯಾ ಗುನಗ ಮತ್ತು ಶೈಲಜಾ ನಾಯ್ಕ ಶಾಲೆಗಳ ವರದಿ ನೀಡಿದರು.
ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ಮುತಲಿಪ್ ವಂದಿಸಿದರು. ಶಿಕ್ಷಕರಾದ ಗಿರೀಶ ನಾಯಕ ಮತ್ತು ತಾರಾ ಗೌಡ ನಿರೂಪಣೆ ಮಾಡಿದರು.ನಂತರ ಸಂಜೆ 6 ಗಂಟೆ ಇಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0