ನ 1 ರಂದು ಕನ್ನಡ ರಾಜ್ಯೋತ್ಸವ & ಭಗವದ್ಗೀತಾ ಅಭಿಯಾನ ಉದ್ಘಾಟನೆ
ಆಪ್ತ ನ್ಯೂಸ್ ಶಿರಸಿ:
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಗಡೆಕಟ್ಟಾ, ತಾ: ಶಿರಸಿ, ಶೈಕ್ಷಣಿಕ ಜಿಲ್ಲೆ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ನ ೧ ರಂದು, ಶನಿವಾರ, ಬೆಳಿಗ್ಗೆ ೯-೩೦ ಘಂಟೆಯಿAದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗಡೆಕಟ್ಟಾ ಇಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ರಾಜ್ಯೋತ್ಸವ ಆಚರಣೆ, ಭಗವದ್ಗೀತಾ ಅಭಿಯಾನ ಉದ್ಘಾಟನೆ ಹಾಗೂ ಶಾರದಾ ಪೂಜೆ ಮತ್ತು ಪಾರಾಯಣ ಪೂಜಾ ಕಾರ್ಯಕ್ರಮ ನಡೆಯಲಿದೆ.
ದೇ ದಿನ ಮಧ್ಯಾಹ್ನ ೩-೩೦ ರಿಂದ “ಸುವರ್ಣ ಸುರಭಿ”, ಶ್ರೀ ಗಜಾನನ ಹೈಸ್ಕೂಲ್, ಹೆಗಡೆಕಟ್ಟಾ ಇಲ್ಲಿ ಶ್ರೀ ಲಕ್ಷ್ಮಿನಾರಾಯಣ ಭಜನಾ ಮಂಡಳಿ, ಹೆಗಡೆಕಟ್ಟಾ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ವಿದೂಷಿ ಸ್ಮಿತಾ ಹೆಗಡೆ, ಕುಂಟೆಮನೆ ಇವರಿಂದ ಸಂಗೀತ ಕಾರ್ಯಕ್ರಮ, ಹಾರ್ಮೋನಿಯಂ: ಕು. ಪ್ರಜ್ವಲ್ ಹೆಗಡೆ ಹಾಗೂ ತಬಲಾ: ಶ್ರೀ ಮಂಜುನಾಥ ಮೋಟಿನಸರ ನುಡಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರುತ್ತೇವೆ. ಅಧ್ಯಕ್ಷರು ಮತ್ತು ಸದಸ್ಯರು, ಎಸ್.ಡಿ.ಎಂ.ಸಿ, ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಹಳೇ ವಿದ್ಯಾರ್ಥಿಗಳ ಸಂಘ, ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಗಡೆಕಟ್ಟಾ, ಪಾಲಕರು ಮತ್ತು ಸಂಗೀತಾಸಕ್ತರು ಹಾಗೂ ಸಮಸ್ತ ಊರನಾಗರಿಕರು ಸ್ವಾಗತ ಕೋರಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



