ಅರಬೈಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Nov 2, 2025 - 12:43
 0  22
ಅರಬೈಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಆಪ್ತ ನ್ಯೂಸ್ ಯಲ್ಲಾಪುರ:

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್.ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯ ಎಲ್ಲ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಆಗಮಿಸಿದ್ದರು. ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ಮಹಾನ್‌ ವ್ಯಕ್ತಿಗಳನ್ನು ಅನುಕರಿಸುವ ಮೂಲಕ ಕನ್ನಡ ಜಯ ಘೋಷಗಳನ್ನು ಮೊಳಗಿಸುತ್ತ ಅದ್ದೂರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್ ಸಿ ಅಧ್ಯಕ್ಷೆ ರೂಪಾ ಬಾಂದಿ ವಹಿಸಿದ್ದರು. ಮೆರವಣಿಗೆಗೆ ಉಪಾಧ್ಯಕ್ಷ ಗುರುರಾಜ ಆಚಾರಿ ಚಾಲನೆ ನೀಡಿದರು. ಮುಖ್ಯಾಧ್ಯಾಪಕಿ ಸಾಹಿತಿ ಶಿವಲೀಲಾ ಹುಣಸಗಿಯವರು ರಾಜ್ಯೋತ್ಸವದ ಕುರಿತು ಮಾತನಾಡಿದರು. ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು. ಪಾಲಕರಿಗಾಗಿ ಓದಿನ ಸ್ಪರ್ಧೆ ನಡೆಯಿತು. ಗ್ರಾ.ಪಂ ಸದಸ್ಯರಾದ ವಿಶ್ವೇಶ್ವರ ಹೆಗಡೆ.ಸಹಶಿಕ್ಷಕ ಮಹೇಶ ಭಟ್ಟ,ಅಂಗನವಾಡಿ ಕಾರ್ಯಕರ್ತೆ ತ್ರೇಷಾ ನೋಹಾ, ಎಸ್.ಡಿ.ಎಮ್.ಸಿ ಸದಸ್ಯರು, ಪಾಲಕರು ಮಾಜಿ ವಿದ್ಯಾರ್ಥಿಗಳು, ಊರ ನಾಗರಿಕರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0