ಕನ್ನಡ ಸಾಹಿತ್ಯ ಪರಿಷತ್ ನೃತ್ಯ ಸಂಗೀತ ಕನ್ನಡ ಉತ್ಸವ

Nov 2, 2025 - 16:02
 0  105
ಕನ್ನಡ ಸಾಹಿತ್ಯ ಪರಿಷತ್ ನೃತ್ಯ ಸಂಗೀತ ಕನ್ನಡ ಉತ್ಸವ

ಆಪ್ತ ನ್ಯೂಸ್ ಜೋಯಿಡಾ:

ತಾಲೂಕಾ ಕೇಂದ್ರ ಜೋಯಿಡಾದ ಕುಣಬಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜೋಯಿಡಾ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ನೃತ್ಯ ಸಂಗೀತ "ಕನ್ನಡ ಉತ್ಸವ"   ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ  ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಎನ್. ಭಾರತಿ ಮಾತನಾಡಿ, ನಾಡೋತ್ಸವ ನಮ್ಮ ನಾಡಿನ ಸಂಸ್ಕೃತಿಯ  ಪ್ರತಿಬಿಂಬ, ನಾಡಿನ  ಭಾಷೆ, ಸಂಸ್ಕೃತಿ ಉಳಿಯಬೇಕು, ಅದು ಇಂತಹ  ಉತ್ಸವದ ಮೂಲಕ ನಿಮ್ಮಿಂದ ಬೆಳಗುವಂತಾಗಲಿ ಎಂದು ಹಾರೈಸಿದರು.
ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಕುಣಬಿ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ಪಿ. ಎಮ್. ಶ್ರೀ. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶ್ಯಾಮ ಪೊಕಳೆ ಮಾತನಾಡಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ಬೆಂಬಲಿಸಿ ಸಹಕರಿಸುವದಾಗಿ ಹೇಳಿದರು.
ವೇದಿಕೆಯಲ್ಲಿ ಗ್ರಾ. ಪಂ. ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಉಪಾಧ್ಯಕ್ಷ ಸಂತೋಷ ಮಂತೇರೊ, ಪ್ರಮುಖರಾದ ಶಕುಂತಲಾ ಹಿರೇಗೌಡರ, ಪ್ರೇಮಾನಂದ ವೇಳಿಪ, ಭವಾನಿ ಛವ್ಹಾಣ,  ಈಶ್ವರ ನಾಯ್ಕ, ಮಾದೇವ ಹಳದನಕರ ಉಪಸ್ಥಿತರಿದ್ದರು.


ಕ.ಸಾ.ಪ. ಅಧ್ಯಕ್ಷ ಪಾಂಡುರಂಗ ಪಟಗಾರ ಸ್ವಾಗತಿಸಿದರು, ಶಿಕ್ಷಕರ ಸಂಘದ ಅಧ್ಯಕ್ಷ ಯಶ್ವಂತ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. 
ಶ್ರೀರಾಮ ಪ್ರೌಢಶಾಲೆ, ಮೊರಾರ್ಜಿ ವಸತಿ ಶಾಲೆ, ಪಿಎಮ್ ಶ್ರೀ. ಶಾಲಾಮಕ್ಕಳು, ನಗರಬಾವಿ, ಮೇಸ್ತ ಬಿರೋಡ ಶಾಲೆ, ಅಂಗನವಾಡಿ ಶಾಲಾ ಮಕ್ಕಳು ಕನ್ನಡ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದ್ದು ಮನಸೂರೆ ಗೊಂಡಿತ್ತು. ಮೊರಾರ್ಜಿ ಶಾಲಾ ಮಕ್ಕಳ ಕಾಂತಾರ ನೃತ್ಯ ಕನ್ನಡ ಮನಸ್ಸುಗಳನ್ನು ಪುಳಕಿತಗಳಿಸಿದ್ದು, ಎಲ್ಲರ ಮನಗೆದ್ದಿತು. ಕನ್ನಡ ಉತ್ಸವದಲ್ಲಿ ಪಾಲ್ಗೊಂಡ ಎಲ್ಲಾ ನೃತ್ಯ ತಂಡಕ್ಕೆ ಸಾಹಿತ್ಯ ಪರಿಷತ್ತಿನ ವತಿಯಿಂದ  ಅಭಿನಂದನಾ ಪತ್ರ ಹಾಗೂ ಬಹುಮಾನ ನೀಡಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0