ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ

ಆಪ್ತ ನ್ಯೂಸ್ ಶಿರಸಿ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2025 - 28 ನೇ ಸಾಲಿಗಾಗಿ ರಾಜ್ಯ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳ ಘಟಕಗಳ ಪದಾಧಿಕಾರಿ ಹುದ್ದೆಗಳಿಗೆ ಚುನಾವಣೆ ಘೋಷಿಸಲಾಗಿದೆ. ಅಂತೆಯೇ ಉ.ಕನ್ನಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ಇತರ ಹುದ್ದೆಗಳಿಗೆ 2025 ನವೆಂಬರ 9 ರಂದು ಚುನಾವಣೆ ನಡೆಯಲಿದೆ. ದಿನಾಂಕ 13/10/2025 ರ ಪೂರ್ವಾಹ್ನ 11ಕ್ಕೆ ಜಿಲ್ಲಾ ಪತ್ರಿಕಾ ಭವನಲ್ಲಿ ಮತದಾರರ ಕರಡು ಪ್ರತಿಯನ್ನು ಪ್ರಕಟಿಸಲಾಯಿತು.
ಅಕ್ಟೋಬರ 16 ರಂದು ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಕ್ಟೋಬರ 18 ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಅಕ್ಟೋಬರ 19 ರಿಂದ ನಾಮಪತ್ರ ಸಲ್ಲಿಕೆ ಆರಂಭ, ಅಕ್ಟೋಬರ 27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಅಕ್ಟೋಬರ 28 ನಾಮಪತ್ರ ಪರಿಶೀಲನೆ. 30 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಮತ್ತು ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆಯಿರುತ್ತದೆ. ನವೆಂಬರ 9 ಭಾನುವಾರ ಮುಂಜಾನೆ 9 ರಿಂದ ಅಪರಾಹ್ನ 3 ರ ವರೆಗೆ ಅಗತ್ಯವಿದ್ದಲ್ಲಿ ಮತದಾನ ನಡೆಯಲಿದೆ. ಅದೇ ದಿನ 3 ರ ನಂತರ ಮತಗಳ ಎಣಿಕೆ ಹಾಗೂ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಅಶೋಕ ಹಾಸ್ಯಗಾರ್ ತಿಳಿಸಿದ್ದಾರೆ.
What's Your Reaction?






