ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಕಝಾಕ್ ಮಹಿಳೆಯ ರಕ್ಷಣೆ
ಆಪ್ತ ನ್ಯೂಸ್ ಗೋಕರ್ಣ:
ಗೋಕರ್ಣದ ಹೆಸರಾಂತ ಕುಡ್ಲೆ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಕಝಾಕಿಸ್ತಾನದ ಮಹಿಳೆಯನ್ನುಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಕುಡ್ಲೆ ತೀರದಲ್ಲಿ ಕಝಾಕಿಸ್ತಾನದ ಮಹಿಳೆಯೊಬ್ಬಳು ಸಮುದ್ರಕ್ಕಿಳಿದು ಈಜುತ್ತಿದ್ದಳು. ಈ ವೇಳೆ ಅಬ್ಬರದ ಅಲೆಗಳಿಗೆ ಸಿಲುಕಿ ಆಕೆ ಸಮುದ್ರದ ಕಡೆಗೆ ಸೆಳೆದೊಯ್ದಳು. ಅಲ್ಲಿಯೇ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸ್ಥಳೀಯ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಮಂಜುನಾಥ್ ಹರಿಕಂತ್ರ, ಗಿರೀಶ್ ಗೌಡ, ಲಕ್ಷ್ಮೀಕಾಂತ ಹರಿಕಂತ್ರ ಅವರುಗಳು ಅಬ್ಬರದ ಅಲೆಗಳ; ನಡುವೆ ಹರಸಾಹಸ ಪಟ್ಟು ಕಝಾಕಿಸ್ತಾನದ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅವರು ನಮ್ಮ ಉತ್ತರ ಕನ್ನಡ ಜಿಲ್ಲೆಯ, ರಾಜ್ಯದ ಹಾಗೂ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ.
ಈ ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



