ಕೆಡಿಸಿಸಿ ಚುನಾವಣೆ ಫಲಿತಾಂಶ ಪ್ರಕಟ: ಸತತ 6 ನೇ ಸಾರಿ ಶಿವರಾಂ ಹೆಬ್ಬಾರ್ ನಿರ್ದೇಶಕರಾಗಿ ಆಯ್ಕೆ

Oct 25, 2025 - 18:47
Oct 25, 2025 - 18:53
 0  427
ಕೆಡಿಸಿಸಿ ಚುನಾವಣೆ ಫಲಿತಾಂಶ ಪ್ರಕಟ: ಸತತ 6 ನೇ ಸಾರಿ ಶಿವರಾಂ ಹೆಬ್ಬಾರ್ ನಿರ್ದೇಶಕರಾಗಿ ಆಯ್ಕೆ

ಆಪ್ತ ನ್ಯೂಸ್ ಶಿರಸಿ:

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ನಡೆದಿದ್ದು, ಫಲಿತಾಂಶ ಒಂದೊಂದಾಗಿ ಪ್ರಕಟವಾಗುತ್ತಿದೆ. ಆಪ್ತ ನ್ಯೂಸ್ ಗೆ ಲಭ್ಯವಾದ ಮಾಹಿತಿಯಂತೆ ಶಿವರಾಂ ಹೆಬ್ಬಾರ್ ಬಣದ 10 ಜನರು ಜಯಗಳಿಸಿದ್ದಾರೆ. ಆದರೆ ಮಾಂಕಾಳ್ ವೈದ್ಯ ಬಣದ 3 ಜನರು ಜಯಗಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಮೂರು ಸ್ಥಾನಗಳ ಫಲಿತಾಂಶ ಬಾಕಿ ಇದೆ.
ಶಾಸಕ ಶಿವರಾಮ ಹೆಬ್ಬಾರ್ ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ಅವರು ಸತತ 6 ನೇ ಸಾರಿ ಕೆಡಿಸಿಸಿ ನಿರ್ದೇಶಕರಾಗಿ ಆಯ್ಕೆಯಾದಂತಾಗಿದೆ. ಹೆಬ್ಬಾರ್ ಅವರು ಜಯಗಳಿಸುತ್ತಿದ್ದಂತೆಯೇ ಅವರ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತ್ತು. ಹೆಬ್ಬಾರ್ ಅವರ ವಿರುದ್ಧ ನಿಂತಿದ್ದ ಗೋಪಾಲಕೃಷ್ಣ ಗಾಂವ್ಕಾರ್ ಅವರು ಸೋಲನ್ನು ಅನುಭವಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1