ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ: ಖಾನಗಾಂವ ಗ್ರಾಮಸ್ಥರಿಂದಲೇ ದುರಸ್ತಿ, ಮೆಚ್ಚುಗೆ

Nov 20, 2025 - 20:22
 0  24
ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ: ಖಾನಗಾಂವ ಗ್ರಾಮಸ್ಥರಿಂದಲೇ ದುರಸ್ತಿ, ಮೆಚ್ಚುಗೆ

ಆಪ್ತ ನ್ಯೂಸ್‌ ಜೋಯಿಡಾ:

ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಜೋಯಿಡಾದ ಗ್ರಾಮದ ಖಾನಗಾಂವ ಗ್ರಾಮಸ್ಥರಿಗೆ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಇದರಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗಿ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಸುವ ಪೈಪುಗಳಲ್ಲಿದ್ದ  ಕಸ,ಎಲೆಗಳು ಸೇರಿಕೊಂಡಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಇದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರಾದ ಸಂತೋಷ, ಮೋಹನ, ವಯಣೋ ಹಾಗೂ ರಾನೀಬಾ ಟ್ರೈ ಮಾತಾ ಸುದ್ದಿ ವಾಹಿನಿಯ ವರದಿಗಾರರಾದ ದೀಪಕ ಗಾವಡಾ ಸೇರಿಕೊಂಡು ನೀರು ಪೂರೈಸುವ ಪೈಪಗಳ ದುರಸ್ತಿ ಕಾರ್ಯ ಕೈಗೊಂಡು, ಗ್ರಾಮಕ್ಕೆ ಮತ್ತೇ ನೀರು ಪೂರೈಸುವ  ಸಮಯೋಚಿತ ಕೆಲಸ ಮಾಡಿದರು.ಗ್ರಾಮಸ್ಥರು ಸ್ವತಃ ಮುಂದೆ ನಿಂತು ತಮ್ಮ ಸಮಸ್ಯೆಯನ್ನು ಬಗೆಹರಿಸಿದರ ಬಗ್ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0