A-ಖಾತಾ B-ಖಾತಾದಲ್ಲಿ ಜನರ ಲೂಟಿ – ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ: ಹೆಚ್ ಡಿ ಕುಮಾರಸ್ವಾಮಿ

Oct 25, 2025 - 15:33
Oct 25, 2025 - 15:34
 0  2
A-ಖಾತಾ B-ಖಾತಾದಲ್ಲಿ ಜನರ ಲೂಟಿ – ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ:  ಹೆಚ್ ಡಿ ಕುಮಾರಸ್ವಾಮಿ

ಆಪ್ತ ನ್ಯೂಸ್ ಬೆಂಗಳೂರು: 

ರಾಜ್ಯ ಸರ್ಕಾರ ಆರಂಭಿಸಿರುವ “ಬಿ ಖಾತಾದಿಂದ ಎ ಖಾತಾ ಪರಿವರ್ತನೆ” ಯೋಜನೆ ಜನರನ್ನು ಮೋಸಗೊಳಿಸುವ ಹೊಸ ಲೂಟಿ ಯೋಜನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಇದು ಸರ್ಕಾರದ ಆರನೇ ಗ್ಯಾರಂಟಿ, ಜನತೆಗೆ ಟೋಪಿ ಹಾಕುವ ಹೊಸ ಪ್ರಯತ್ನ. ಈ ಯೋಜನೆ ಜನರಿಗೆ ಅನುಕೂಲ ತರುವ ಬದಲು ಹೆಚ್ಚುವರಿ ಹಣಕಾಸು ಹೊರೆಯನ್ನು ಮಾತ್ರ ನೀಡಲಿದೆ” ಎಂದು ಟೀಕಿಸಿದರು.

🔹 “A-ಖಾತಾ B-ಖಾತಾದಲ್ಲಿ ಜನರ ಲೂಟಿ”

ಕುಮಾರಸ್ವಾಮಿ ಮುಂದುವರಿದು, “ಐದು ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗಾಗಲೇ ರಾಜ್ಯದ ಖಜಾನೆ ಖಾಲಿ ಮಾಡಿದೆ. ಈಗ A-ಖಾತಾ, B-ಖಾತಾ ಯೋಜನೆ ಎಂಬ ಹೆಸರಿನಲ್ಲಿ ಜನರನ್ನು ಮತ್ತೊಮ್ಮೆ ಲೂಟಿ ಮಾಡಲು ಮುಂದಾಗಿದೆ.

ಬೆಸ್ಕಾಂ ಕಚೇರಿಗಳಲ್ಲಿ ಈಗಾಗಲೇ 3–4 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಜನರಿಗೆ ಇದರಿಂದ ಯಾವುದೇ ನೈಜ ಪ್ರಯೋಜನ ಆಗುವುದಿಲ್ಲ. ಬದಲಿಗೆ ಸರ್ಕಾರ ಶೇಕಡಾ 5ರಷ್ಟು ಹೆಚ್ಚುವರಿ ಶುಲ್ಕ ವಿಧಿಸುವ ಮೂಲಕ ಜನರ ಮೇಲೆ ಮತ್ತೊಂದು ಬರೆ ಹೇರಲಿದೆ” ಎಂದು ಆರೋಪಿಸಿದರು.

“ನಾನು ಓಪನ್ ಆಗಿ ಹೇಳುತ್ತಿದ್ದೀನಿ – ಜನರು ಈ ಮೋಸದ ಬಲೆಗೆ ಬೀಳಬಾರದು. ಇನ್ನೆರಡು ವರ್ಷ ಸಹನೆ ಇಡಿ, ಈ ಯೋಜನೆ ಹೇಗೆ ಜನರನ್ನು ಕಷ್ಟಕ್ಕೆ ತರುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ,” ಎಂದು ಎಚ್ಚರಿಸಿದರು.

🔹 ಬಿ ಖಾತಾ ಸಮಸ್ಯೆ ಹೊಸದು ಅಲ್ಲ

ಬಿ ಖಾತಾ ವಿವಾದ 1995ರಿಂದಲೂ ಇರುವುದು ಎಂದು ಕುಮಾರಸ್ವಾಮಿ ಸ್ಮರಿಸಿದರು.
“1997ರಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಆದೇಶ ಹೊರಬಂದಿತ್ತು. ನಮ್ಮ ಆಡಳಿತಾವಧಿಯಲ್ಲಿ ನಗರಾಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದೆವು — 7 ನಗರಸಭೆಗಳನ್ನು 9ಕ್ಕೆ ಏರಿಸಿದ್ದೆವು, 68 ವಾರ್ಡ್‌ಗಳನ್ನು 98ಕ್ಕೆ ವಿಸ್ತರಿಸಿದ್ದೆವು, ಹಾಗೂ 110 ಹಳ್ಳಿಗಳನ್ನು ಬಿಬಿಎಂಪಿಗೆ ಸೇರಿಸಿದ್ದೆವು.

ಆ ಐದು ವರ್ಷಗಳಲ್ಲಿ 25 ಸಾವಿರ ಕೋಟಿ ರೂಪಾಯಿ ಅನುದಾನ ನಗರಾಭಿವೃದ್ಧಿಗೆ ತಂದಿದ್ದೆವು. ಇಂತಹ ನಿಜವಾದ ಅಭಿವೃದ್ಧಿ ಯೋಜನೆಗಳೇ ಜನರಿಗೆ ಉಪಕಾರಿಯಾದವು, ಆದರೆ ಈಗಿನ ಯೋಜನೆ ಜನರ ಮೇಲೆ ಹೊರೆಯಷ್ಟೇ ತಂದಿದೆ,” ಎಂದು ಮಾಜಿ ಸಿಎಂ ಖಂಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0