ಕಾನೂನು ಅರಿವು ಕಾರ್ಯಕ್ರಮ

ಆಪ್ತ ನ್ಯೂಸ್ ಯಲ್ಲಾಪುರ:
ತಾಲೂಕಿನ ಕಿರವತ್ತಿಯ ತೆಂಗಿನಗೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಆಶ್ರಯದಲ್ಲಿ ಬಸವೇಶ್ವರ ಜ್ಞಾನ ವಿಕಾಸ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು.
ಹುಬ್ಬಳ್ಳಿಯ ಗುರು ಸಿದ್ದಪ್ಪ ಕೊತಂಬರಿ ಕಾನೂನು ಪದವೀ ಮಹಾವಿದ್ಯಾಲಯದ ಕಾನೂನು ಪಧವಿಧರ ವಿದ್ಯಾರ್ಥಿನಿಯರು ಕಾನೂನು ಅರಿವು ಬಗ್ಗೆ ಮಾಹಿತಿ ನೀಡಿ, ವರದಕ್ಷಿಣೆ ಪಿಡುಗು, ಶಿಕ್ಷಣದಲ್ಲಿ ಪಾಲಕರ ಪಾತ್ರ,ಸ್ತ್ರೀ ಶೋಷಣೆ ಮುಂತಾದ ಸಂಗತಿಗಳ ಕುರಿತಾಗಿ ವಿವರವಾಗಿ ತಿಳಿಸಿಕೊಟ್ಟರು.
ಉಚಿತ ಕಾನೂನು ನೆರವು ವಿಧಾನ,ಉಚಿತ ಸಹಾಯವಾಣಿಗಳ ಬಗ್ಗೆ ತಿಳಿಸಿದರು.
ಕಿರವತ್ತಿಯ ಹೊಸಳ್ಳಿ ಬಿ ಕ್ಷೇತ್ರ ಒಕ್ಕೂಟದ ಅಧ್ಯಕ್ಷೆ ಶಕುಂತಲಾ ದಾಕ್ಲು ಥೋರತ್, ಸೇವಾ ಪ್ರತಿನಿಧಿ ರೂಪಾ ಆನಂದ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಅಗೇರ್ ಹಾಗೂ ಮಹಿಳಾ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
What's Your Reaction?






