ವಿಧಾನ ಪರಿಷತ್ ಸಭಾಪತಿಗಳ ಕಾರಿನ ಟಯರ್ ಬ್ಲಾಸ್ಟ್: ಪ್ರಾಣಾಪಾಯದಿಂದ ಪಾರಾದ ಹೊರಟ್ಟಿ
ರಾಜ್ಯದ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಯಲ್ಲಾಪುರದ ಮೂಲಕ ಹುಬ್ಬಳ್ಳಿಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಡೊಮಗೆರೆ ಕ್ರಾಸ್ ಬಳಿ ರಸ್ತೆಯ ಭಾರೀ ಹೊಂಡದಲ್ಲಿ ಟೈರ್ ಸಿಲುಕಿ ಒಡೆದರೂ (ಬ್ಲಾಸ್ಟ್) ಪ್ರಾಣಾಪಾಯದಿಂದ ಪಾರಾದ ಘಟನೆ ಬುಧವಾರ ಸಂಜೆ ನಡೆದಿದೆ.

ಆಪ್ತ ನ್ಯೂಸ್ ಯಲ್ಲಾಪುರ:

ಕೈಗೆ ಅಲ್ಪ ಸ್ವಲ್ಪ ನೋವಾಗಿದೆ.
ತಕ್ಷಣ ತಮ್ಮ ಆತ್ಮೀಯ ಪ್ರಮೋದ ಹೆಗಡೆಯವರನ್ನು ಸಂಪರ್ಕಿಸಿ ಅವರ ಕಾರಿನ ಮೇಲೆ ಮುಂದಿನ ಪ್ರಯಾಣ ಬೆಳೆಸಿದರು.ನಂತರದಲ್ಲಿ ಪೋಲಿಸರು ಸ್ಥಳಕ್ಕೆ ಹೋಗಿ ಕಾರು ದುರಸ್ಥಿಯಾಗುವುದಕ್ಕೆ ಸಹಕರಿಸಿದರು.
ಈ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚರಿಸುವುದು ತೀರಾ ಕಷ್ಟದ ಸ್ಥಿತಿ. ಸದ್ಯ ಅದರದ್ದೇ ಗೌಜಿ ಎಲ್ಲೆಡೆ.ಅದರಲ್ಲೂ ಚಾಲಕರಿಗೆ ವಾಹನ ಚಲಾಯಿಸುವುದಂತೂ ಸವಾಲೇ ಆಗಿದೆ. ನಮ್ಮ ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳು ತೀವೃ ಹೊಂಡಮಯವಾದ ಪರಿಣಾಮ ಅಲ್ಲಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ಲುವುದನ್ನು ಕಾಣುತ್ತಿದ್ದೇವೆ. ಒಬ್ಬ ಸಭಾಪತಿಗಳ ಹೈಟೆಕ್ ಕಾರಿನ ಸ್ಥಿತಿಯೇ ಹೀಗಾದರೆ ಸಾಮಾನದಯ ವಾಹನ ಮಾಲಿಕರ ಸ್ಥಿತಿ ಏನಾದೀತು ? ಎಂಬುದು ಪ್ರಶ್ನೆ.
What's Your Reaction?