ಪತ್ರಕರ್ತನ ಎದುರು ಪ್ರತ್ಯಕ್ಷವಾದ ಚಿರತೆ
ಆಪ್ತ ನ್ಯೂಸ್ ಜೋಯಿಡಾ:
ಪತ್ರಕರ್ತರೊಬ್ಬರಿಗೆ ಚಿರತೆ ಕಾಣಿಸಿಕೊಂಡಿದ್ದು, ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿರತೆಯೊಂದು ಫೋಟೋಲಿ-ಗುಂದ-ಉಳವಿ ರಸ್ತೆ ಪಕ್ಕದಲ್ಲಿ ಕಾಣಿಸಿಕೊಂಡು ಒಮ್ಮೆ ಶಾಕ್ ನೀಡಿದೆ.
ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಅರಣ್ಯ ಮತ್ತು ಸಾಮಾಜಿಕ ಅರಣ್ಯಗಳ ನಡುವೆ ಫೋಟೋಲಿ ಅರಣ್ಯ ಪ್ರದೇಶದಲ್ಲಿ ಈ ಚಿರತೆ ಕಾಣಿಸಿದೆ. ಕೆಲಸದ ನಿಮಿತ್ತ ಹೊರಗೆ ಹೋದ ಪತ್ರಕರ್ತ ತಿಲಕರಾಜ್ ಇದೇ ರಸ್ತೆಯಲ್ಲಿ ಬರುವಾಗ ರಾತ್ರಿಯಾಗಿತ್ತು. ಮೋಡ ಕವಿದ ವಾತಾವರಣ ಬೇರೆ ಇಂತ ಸ್ಥಿತಿಯಲ್ಲಿ ರಾತ್ರಿ ಸಮಯದಲ್ಲಿ ಮನೆ ಸೇರುವ ವಿಚಾರ ಮಾಡುತ್ತಾ ತಮ್ಮ ಕಾರ್ ಚಾಲನೆಯಲ್ಲಿ ನಿರತರಾಗಿದ್ದರು. ಆಗ ಎದುರಿಗೆ ಕಂಡ ಚಿರತೆಯನ್ನು ನೋಡಿದರು.
ಚಿರತೆ ಕಂಡ ತಕ್ಷಣ ತಮ್ಮ ಗಾಡಿಯ ವೇಗ ಕಡಿಮೆ ಮಾಡಿಕೊಂಡು ಅಕ್ಕ ಪಕ್ಕ ಮತ್ತೆ ಬೇರೆ ಚಿರತೆಗಳು ಇರಬಹುದೆಂದು ನೋಡಿದರು. ಬೇರೆ ಚಿರತೆಗಳಿರಲಿಲ್ಲ, ಅದೂ ಕೂಡ ಒಂಟಿಯಾಗಿ ಓಡಾಡುವ ವಯಸ್ಸಿನದು ಅಂದಾಜು 3 ರಿಂದ 5 ವರ್ಷ ಇರಬಹುದು ಎಂದು ಹೇಳುತ್ತಾರೆ. ಕೂಡಲೇ ತಮ್ಮ ಮೊಬೈಲ್ ನಿಂದ ಚಿತ್ರಿಸಿಕೊಂಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



