ಎಲ್. ಎಸ್.  ಶಾಸ್ತ್ರಿ ಅವರಿಗೆ "ಮಹಾಬಲ ಪ್ರಶಸ್ತಿ"

Oct 1, 2025 - 21:32
 0  35
ಎಲ್. ಎಸ್.  ಶಾಸ್ತ್ರಿ ಅವರಿಗೆ "ಮಹಾಬಲ ಪ್ರಶಸ್ತಿ"

ಆಪ್ತ ನ್ಯೂಸ್ ಹೊನ್ನಾವರ:
ಪ್ರಸಿದ್ಧ ಯಕ್ಷಗಾನ ಕಲಾವಿದ ಡಾ. ಕೆರೆಮನೆ ಮಹಾಬಲ ಹೆಗಡೆಯವರ ೧೬ ನೆಯ ಸಂಸ್ಮರಣಾ ದಿನ ಮತ್ತು  ಕೆರೆಮನೆ ರಾಮ ಹೆಗಡೆಯವರ ೬ ನೆಯ ಸಂಸ್ಮರಣಾ ದಿನಗಳ ಅಂಗವಾಗಿ ಇದೇ ದಿ. ೧೮-೧೦-೨೦೨೫ ರಂದು ಸಂಜೆ ೪ ಗಂಟೆಗೆ ಹೊನ್ನಾವರ ತಾಲೂಕು ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ,ಸಾಹಿತಿ, ರಂಗಚಿಂತಕ ಲಕ್ಷ್ಮೀನಾರಾಯಣ ಶಾಸ್ತ್ರಿ, ನಾಜಗಾರ ( ಬೆಳಗಾವಿ) ಇವರಿಗೆ ಈ ವರ್ಷದ " ಮಹಾಬಲ ಪ್ರಶಸ್ತಿ " ನೀಡಿ ಗೌರವಿಸಲಾಗುವುದು. ಖ್ಯಾತ ಯಕ್ಷಗಾನ ಕಲಾವಿದರಾದ ಪ್ರೊ. ಎಂ. ಎಲ್. ಸಾಮಗ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಪತ್ರಕರ್ತ ಸಾಹಿತಿ ಕೃಷ್ಣಮೂರ್ತಿ ಹೆಬ್ಬಾರ ಮುಖ್ಯ ಅತಿಥಿಗಳಾಗಿರುವರು. ನಂತರ ಕೃಷ್ಣ ಸಂಧಾನ ಯಕ್ಷಗಾನ ಕಲಾಪ್ರದರ್ಶನವಿದೆ. 
ಯಕ್ಷಗಾನ ಕಲಾರಸಿಕರು ಆಗಮಿಸಬೇಕೆಂದು ಕೋರಲಾಗಿದೆ.
82ನೇ ವಸಂತದಲ್ಲಿರುವ ಶಾಸ್ತ್ರಿಯವರು ಆರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ, ಪತ್ರಿಕೆ, ಯಕ್ಷಗಾನ, ಸಂಗೀತ, ನಾಟಕ ಮತ್ತು ಗಮಕ ಮೊದಲಾದ ಕ್ಷೇತ್ರಗಳಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0