ಕಮಲಬಿಂದು ಬಳಗದಿಂದ ಮೋಕ್ಷ ತ್ರಯ ತಾಳಮದ್ದಳೆ
ಆಪ್ತ ನ್ಯೂಸ್ ಶಿರಸಿ:
ತಾಲೂಕಿನ ಭೈರುಂಬೆಯ ನಾಗರಕುರ ಕಮಲಬಿಂದು ಬಳಗ \ಇದರ ವತಿಯಿಂದ: ಮೋಕ್ಷ ತ್ರಯ (ಜಟಾಯು ಮೋಕ್ಷ, ವಾಲಿ ಮೋಕ್ಷ, ಸುಧನ್ವ ಮೋಕ್ಷ) ಎಂಬ ತಾಳಮದ್ದಳೆ ಕಾರ್ಯಕ್ರಮವು ಶಿರಸಿ ಯಲ್ಲಾಪುರ ರಸ್ತೆಯಲ್ಲಿರುವ ಆದರ್ಶ ವನಿತಾ ಸಮಾಜದಲ್ಲಿ, ಇಂದಿನಿಂದ ಅಕ್ಟೊಬರ್ ೨೭ರವರೆಗೆ ಸಂಜೆ ೪-೦೦ ರಿಂದ ೮-೦೦ ರ ವರೆಗೆ ನಡೆಯಲಿದೆ.
ಅಕ್ಟೊಬರ್ ೨೫ ರಂದು ಉಪೇಂದ್ರ ಪೈ ಶಿರಸಿ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನಂತಮೂರ್ತಿ ಹೆಗಡೆ ಶಿರಸಿ ಇವರು ಆಗಮಿಸಲಿದ್ದಾರೆ.
ಅಕ್ಟೊಬರ್ ೨೬ರಂದು ಮುಖ್ಯ ಅತಿಥಿಗಳಾಗಿ ಸುರೇಶ್ ಚಂದ್ರ ಹೆಗಡೆ ಕೆಶಿನ್ಮನೆ ಮತ್ತು ಕೇಶವ ಹೆಗಡೆ ನಾಗರಕುರ ಭಾಗವಹಿಸಲಿದ್ದಾರೆ. ಅಕ್ಟೊಬರ್ ೨೭ರಂದು ಎಂ ಎನ್ ಹೆಗಡೆ ಹಲಸಿನಹಳ್ಳಿ ಮತ್ತು ಲೋಕೇಶ ಹೆಗಡೆ ಶಿರಸಿ ಇವರು ಆಗಮಿಸಲಿದ್ದಾರೆ.
ಈ ತಾಳಮದ್ದಳೆಯಲ್ಲಿ ಭಾಗವತರು - ಗಣಪತಿ ಹೆಗಡೆ ತಟ್ಟಿಸರ, ಮದ್ದಳೆ- ಶ್ರೀಪಾದ ಭಟ್ ಮೂಡಗಾರ, ಅರ್ಥಧಾರಿಗಳು - ಸುಬ್ರಾಯ ಹೆಗಡೆ ಕೆರೆಕೊಪ್ಪ, ಕೃಷ್ಣ ಹೆಗಡೆ ಮುರುಡೇಶ್ವರ, ಶ್ರೀನಿವಾಸ ಮತ್ತಿಘಟ್ಟ, ರೋಹಿಣಿ ಹೆಗಡೆ, ದಾಕ್ಷಾಯಿಣಿ ಪಿ.ಸಿ., ಮಂಜುನಾಥ ಗೊರಮನೆ, ಸಹನಾ ಜೋಶಿ, ಪ್ರಸಾದ ಹಲಗೇರಿ, ನಾಟ್ಯಾಚಾರ್ಯ ಶಂಕರ ಭಟ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರಾದ ಕೇಶವ ಹೆಗಡೆ ನಾಗರಕುರ ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಯಶಸ್ಸಿಗೆ ಕಾರಣರಾಗಬೇಕಾಗಿ ವಿನಂತಿಸಲಾಗಿದೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



