ಗಣವೇಷಧಾರಿಯಾದ ಸಂಸದ ಕಾಗೇರಿ

Oct 6, 2025 - 08:17
 0  89
ಗಣವೇಷಧಾರಿಯಾದ ಸಂಸದ ಕಾಗೇರಿ

ಆಪ್ತ ನ್ಯೂಸ್ ಶಿರಸಿ:
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕುಳುವೆ ಮಂಡಲವು ಶಿರಸಿ ತಾಲೂಕಿನ ಕುಳವೆಯಲ್ಲಿ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ, ಮಾನ್ಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪಾಲ್ಗೊಂಡರು.
​ಸಂಘದ ಕಾರ್ಯಕ್ರಮದ ಸಂಪ್ರದಾಯದಂತೆ ಸಂಸದರು ಗಣವೇಷ (ಸಂಘದ ಸಮವಸ್ತ್ರ) ಧರಿಸಿ ಉತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. 
ಈ ಮೂಲಕ ಅವರು ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಸ್ವಯಂಸೇವಕರು,  ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0