ನಿವೃತ್ತ ನೌಕರನ ಮನೆಯಲ್ಲಿ ನಗರಸಭೆ ಖಾಯಂ ಸಿಬ್ಬಂದಿಗಳ ಮೂಲ ಕಡತ, ಸರ್ವಿಸ್ ಫೈಲ್ ಪರಿಶೀಲನೆ - ತಿದ್ದುಪಡಿ.
ಆಪ್ತ ನ್ಯೂಸ್ ದಾಂಡೇಲಿ:
ದಾಂಡೇಲಿ ನಗರಸಭೆಯಲ್ಲಿ ನಗರಸಭೆ ಸಿಬ್ಬಂದಿಗಳದ್ದೇ ದರ್ಬಾರ್ ಇವರಿಗೆ ಇಲ್ಲಿ ಹೇಳುವರು ಕೇಳುವರು ಯಾರು ಇಲ್ಲವೆಂಬಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಗರಸಭೆ ಎಂದರೆ ನಗರದ ಆಡಳಿತ ಮತ್ತು ನಿರ್ವಹಣೆ ಹೊಂದಿರುವ ಸ್ಥಳೀಯ ಸರ್ಕಾರಿ ಸಂಸ್ಥೆ .ಇಂತಹ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಖಾಯಂ ಸಿಬ್ಬಂದಿಗಳ ಸರ್ವಿಸ್ ಫೈಲ್ ಗಳು ಕಾನೂನು ಬಾಹಿರವಾಗಿ ನಗರಸಭೆಯನ್ನು ಬಿಟ್ಟು ಹೊರಗಡೆ ಖಾಸಗಿ ಮನೆಯೊಂದರಲ್ಲಿ ನಿವೃತ್ತ ನೌಕರನಿಂದ ಸರ್ವಿಸ್ ಫೈಲ್ ಗಳು ಪರಿಶೀಲನೆ ಮತ್ತು ತಿದ್ದುಪಡೆಯಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿರುವುದು ಈಗ ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಸಿಬ್ಬಂದಿಗಳ ಸರ್ವಿಸ್ ಫೈಲಗಳ ಪರಿಶೀಲನೆ ಮಾಡುವ ನಗರ ಸಭೆಯ ಸಿಬ್ಬಂದಿಯು ತನ್ನ ಜವಾಬ್ದಾರಿಯುತ ಕೆಲಸವನ್ನು ಬೇರೆಯವರ ಕಡೆಯಿಂದ ಪರಿಶೀಲನೆ ಮತ್ತು ತಿದ್ದುಪಡೆ ಮಾಡಿಸುವುದು ನಿಯಮ ಬಾಹಿರವಾಗಿದೆ. ಹಾಗಾದರೆ ಈ ಸರ್ವಿಸ್ ಫೈಲ್ಗಳ ಪರಿಶೀಲನೆ ಮತ್ತು ತಿದ್ದುಪಡಿ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಸಿಬ್ಬಂದಿಯು. ತನ್ನ ಜವಾಬ್ದಾರಿ ಯುತವಾದ ಕೆಲಸವನ್ನು ಬೇರೆಯವರಕಡಯಿಂದ ಮಾಡಿಸುತ್ತಿರುವುದು ಏಕೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.ಕಳೆದ ಬಾರಿ ನಗರಸಭೆಯಲ್ಲಿ ಠರಾವ ತಿದ್ದುಪಡಿಯ ಬಗ್ಗೆ ಇಲ್ಲಿ ನೆನಪಿಸಿಕೊಳ್ಳಬಹುದು . ಈ ರೀತಿಯ ಸರ್ಕಾರಿ ಫೈಲ್ ಗಳು ನಗರಸಭೆ ಆವರಣದ ಹೊರಗಡೆ ಕಾನೂನು ಬಾಹಿರವಾಗಿ ಸಾಮಾನ್ಯ ಜನರ ಮನೆಯಲ್ಲಿ ಪರಿಶೀಲನೆ ತಿದ್ದುಪಡೆ ನಡೆಯುತ್ತಿದ್ದರೆ ನಗರಸಭೆಯು ತನ್ನ ಸರ್ಕಾರಿ ಕೇಲಸದ ಜವಾಬ್ದಾರಿಯನ್ನು ಮರೆತಿದೆ ಎಂದರ್ಥವಾಗುತ್ತಿದೆ.
ನಗರಸಭೆಯು ಸರ್ಕಾರಿ ದಾಖಲೆಗಳ ಗೌಪ್ಯತೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದರ್ಥ. ನಗರಸಭೆಯಲ್ಲಿ ಇಂತಹ ಸಿಬ್ಬಂಧಿಗಳು ರಾಜಾರೊಷವಾಗಿ ನಿಯಮಗಳನ್ನು ಗಾಳಿಗೆ ತೂರಿ ತಮ್ಮದೆ ದರ್ಬಾರ ನಡೆಸುತ್ತಿದ್ದಾರೆ. ಇನ್ನು ಮುಂದೆಯಾದರು ನಗರಸಭೆಯ ಪೌರಾಯುಕ್ತರು ಅಧ್ಯಕ್ಷರು ಎಚ್ಚೆತ್ತು ಇ ಬಗ್ಗೆ ತನಿಖೆ ನಡೆಸುತ್ತಾರೋ ಇಲ್ಲವೊ ಎಂದು ಕಾದು ನೋಡಬೇಕಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



