ಹಳವಳ್ಳಿಯಲ್ಲಿ ಜನ ಮನ ರಂಜಿಸಿದ ನಾದಸಂಜೆ
ಆಪ್ತ ನ್ಯೂಸ್ ರಾಮನಗುಳಿ:
ಅಂಕೋಲಾ ತಾಲೂಕಿನ ಹಳವಳ್ಳಿಯ ಕಲಾಶ್ರೀ ಸಾಂಸ್ಕೃತಿಕ ಸಂಘ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಕಲಾ,ಸಾಂಸ್ಕೃತಿಕ ಕಾರ್ಯಕ್ರಮ ದ ಅಂಗವಾಗಿ ಈ ವರ್ಷ ಸಂಗೀತ ನಾದ ಸಂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಲಾವಿದರು, ಪ್ರಸಾಧನಕಾರರೂ ಆದ ಹರಿಹರ ಭಟ್ಟ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವುದು ಸಂಘಟಕರ ಮೂಲ ಉದ್ದೇಶವಾಗಿರುವದರಿಂದ ಪ್ರತಿ ವರ್ಷದ ಕಾರ್ಯಕ್ರಮದಲ್ಲೂ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿದ್ದಾರೆ. ಅದೇ ರೀತಿ ಈ ಸಲ ಕುಮಾರಿ ಹಿತಾ ವಿನಯ್ ಹೆಗಡೆ ಹಾಗೂ ಕುಮಾರಿ ಆರಾಧ್ಯಾ ಗಣೇಶ ಭಟ್ಟ ಪ್ರಾರ್ಥಿಸಿದರು. ಕುಮಾರಿ ಅನಘಾ ಭಟ್ಟ ತಬಲಾ ಸಾಥ್ ನೀಡಿದಳು.
ನಂತರ ಹಾವೇರಿಯ ಪ್ರಖ್ಯಾತ ಶಹನಾಯಿ ಕಲಾವಿದರಾದ ಸತೀಶ ಭಜಂತ್ರಿಯವರ ಶಹನಾಯಿ ವಾದನ ಕಾರ್ಯಕ್ರಮ ಜರುಗಿತು. ಅನೇಕ ಜನಪ್ರಿಯ ಗೀತೆಗಳಿಗೆ ,ಭಕ್ತಿ ಗೀತೆಗಳಿಗೆ ಶಹನಾಯಿ ಯಲ್ಲಿ ನುಡಿಸಿದರು. ಇಂಪಾದ ರಾಗ ನೆರೆದವರ ಕರ್ಣಪದರವನ್ನು ತಾಕಿ ಆನಂದವನ್ನುಂಟು ಮಾಡಿತು.
ನಂತರದಲ್ಲಿ ಸ್ಥಳೀಯ ಕಲಾವಿದರು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೆಸರುಮಾಡಿರುವ ಹರೀಶ ಹೆಗಡೆಯವರು ರಾಗ್ ಮಾಲ್ ಕಂಸ ದಲ್ಲಿ ಪ್ರಾರಂಭಿಸಿ ಜನಪ್ರೀಯ ಭಾವಗೀತೆ, ಭಕ್ತಿಗೀತೆಗಳನ್ನು ಹಾಡಿದರು. ಪ್ರೇಕ್ಷಕರ ಬೇಡಿಕೆಯ ಕೆಲವು ಹಾಡುಗಳನ್ನು ಹಾಡಿ ನೆರೆದವರ ಮನ ತಣಿಸಿದರು. ಇವರಿಗೆ ಹಿರಿಯ ಸಂಗೀತ ಕಲಾವಿದರಾದ ಪ್ರಕಾಶ ಹೆಗಡೆ ಯಡಳ್ಳಿ ಹಾರ್ಮೋನಿಯಂ ಸಾಥನ್ನು ನೀಡಿದರು ಯುವ ಪ್ರತಿಭೆ ಪ್ರದೀಪ ಕೋಟೆಮನೆ ತಬಲಾ ಸಾಥ್ ನೀಡಿದರು. ಕಾರ್ಯಕ್ರಮ ನೆರೆದವರ ಮನ ಮುದಗೊಳಿಸಿತು.
What's Your Reaction?
Like
1
Dislike
0
Love
0
Funny
1
Angry
0
Sad
0
Wow
0



