ರಾಜ್ಯಮಟ್ಟಕ್ಕೆ ಆಯ್ಕೆಯಾದ ನವ್ಯಾ

Nov 13, 2025 - 15:41
 0  285
ರಾಜ್ಯಮಟ್ಟಕ್ಕೆ ಆಯ್ಕೆಯಾದ ನವ್ಯಾ

ಆಪ್ತ ನ್ಯೂಸ್ ರಾಮನಗುಳಿ:

ಬಾಲ ವಿಕಾಸ ಅಕಾಡೆಮಿ ಧಾರವಾಡ ಇವರು ಮಕ್ಕಳ ದಿನಾಚರಣೆಯ ಪ್ರಯುಕ್ತ  ಆಯೋಜಿಸಿದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಿದ್ದು, ನವ ಭಾರತದ ನಿರ್ಮಾಣದಲ್ಲಿ ಜವಾಹರಲಾಲ್ ನೆಹರುರವರ ಕೊಡುಗೆ ಎಂಬ ವಿಷಯದ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅಂಕೋಲಾ ತಾಲೂಕಿನ ಹೆಗ್ಗಾರ(ಪು) ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ ಕುಮಾರಿ ನವ್ಯಾ ರಾಘವೇಂದ್ರ ಗಾಂವ್ಕರ್ ಶೆವ್ಕಾರ್ ಇವಳು ಜಿಲ್ಲೆಗೆ ಮೊದಲ ಸ್ಥಾನ ಪಡೆಯುವ ಮೂಲಕ ಶಾಲೆಗೆ, ಊರಿಗೆ ಕೀರ್ತಿ ತಂದಿರುತ್ತಾಳೆ. ಈ ಮೂಲಕ ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿದ್ದಾಳೆ.
ಇವಳು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿಯೂ, ಚೆಸ್ ನಲ್ಲೂ ಕೂಡ ಪ್ರತಿಭಾವಂತ ವಿದ್ಯಾರ್ಥಿನಿ. ಇವಳು ಶೆವ್ಕಾರಿನ ರಾಘವೇಂದ್ರ ಗಾಂವ್ಕರ್ ಹಾಗೂ ಭಾಗೀರಥಿ ಗಾಂವ್ಕರ್ ಇವರ ಮಗಳು.
ಇವಳ ಸಾಧನೆಗೆ ಶಾಲೆಯ ಮುಖ್ಯೋಧ್ಯಾಪರಾದ ಗಣೇಶ ಭಟ್ಟ ಹಳವಳ್ಳಿ, ಹೆಗ್ಗಾರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾರಾಯಣ ಭಾಗ್ವತ್, ಸಹ ಶಿಕ್ಷಕರುಗಳು, ಎಸ್ ಡಿ ಎಂ ಸಿ ಸದಸ್ಯರು, ಊರ ನಾಗರಿಕರು ಹರ್ಷವನ್ನು ವ್ಯಕ್ತಪಡಿಸಿರುತ್ತಾರೆ.

What's Your Reaction?

Like Like 2
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0