ಸಮಿತಿ ಇಲ್ಲ, ವಿಚಾರಣೆ ಇಲ್ಲ. ಆದರೂ ಜಿಲ್ಲೆಯಲ್ಲಿ ೭೩,೨೦೬ ಅರ್ಜಿ ತಿರಸ್ಕಾರ: ರವೀಂದ್ರ ನಾಯ್ಕ

ಶಿರಸಿಯಲ್ಲಿ ಅ. ೪ ರಂದು ಬೃಹತ್ ಮೇಲ್ಮನವಿ ಅಭಿಯಾನ

Sep 27, 2025 - 20:24
 0  94
ಸಮಿತಿ ಇಲ್ಲ, ವಿಚಾರಣೆ ಇಲ್ಲ. ಆದರೂ ಜಿಲ್ಲೆಯಲ್ಲಿ ೭೩,೨೦೬ ಅರ್ಜಿ ತಿರಸ್ಕಾರ: ರವೀಂದ್ರ ನಾಯ್ಕ

ಆಪ್ತ ನ್ಯೂಸ್ ಜೋಯಿಡಾ:

ನಂಬಿದರೇ ನಂಬಿ. ಬಿಟ್ಟರೆ ಬಿಡಿ. ಅರ್ಜಿ ತೀರ್ಮಾನಿಸಲೂ ಸಮಿತಿ ಇರಬೇಕು. ಸಮಿತಿಯ ಮುಂದೆ ಅರಣ್ಯವಾಸಿಯ ವಿಚಾರಣೆ ಆಗಬೇಕು. ಆದರೇ, ಸಮಿತಿ ಅಸ್ತಿತ್ವವಿಲ್ಲ, ವಿಚಾರಣೆ ಇಲ್ಲ. ಆದರೂ ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯ ೭೩,೨೦೬ ಅರ್ಜಿ ತಿರಸ್ಕಾರವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
      ಅವರು ಇಂದು ಜೋಯಿಡಾ ತಾಲೂಕಿನ ಕುಣಬಿ ಭವನದ ಸಭಾಂಗಣದಲ್ಲಿ ಅ. ೪ ರಂದು ಶಿರಸಿಯಲ್ಲಿ ಜರುಗುವ ತಿರಸ್ಕೃತ ಅರ್ಜಿಗಳ ಮೇಲ್ಮನವಿ ಅಭಿಯಾನದ ಮಾಹಿತಿ ಕಾರ್ಯಗಾರದಲ್ಲಿ ಅರಣ್ಯವಾಸಿಗಳನ್ನೂದ್ದೇಶಿಸಿ ಮಾತನಾಡಿದರು..
       ಸುಪ್ರಿಂ ಕೊರ್ಟ ನಿರ್ದೇಶನ ಮತ್ತು ಕೇಂದ್ರ ಸಕಾರದ ಮಾರ್ಗದರ್ಶನದಂತೆ ತಿರಸ್ಕರಿಸಿದ ಸಮಿತಿಯೇ, ತಿರಸ್ಕರಿಸಿದ ಅರ್ಜಿಯನ್ನ ಪುನರ್ ಪರಿಶೀಲಿಸಿಬೇಕೆಂಬ ನೀತಿಗೆ ವಿರುದ್ದವಾಗಿ ಅರ್ಜಿಗಳು ತಿರಸ್ಕರಿಸಲ್ಪಟ್ಟಿರುವುದು ವಿಷಾದಕರವೆಂದು ಅವರು ಹೇಳಿದರು.
      ಪ್ರಮುಖ ಅರಣ್ಯವಾಸಿ ಹೋರಾಟಗಾರ ಸುಭಾಷ ಗಾವಡಾ ಪ್ರಸ್ತಾವಿಕ ಮಾತನಾಡುತ್ತಾ ಅರಣ್ಯವಾಸಿಗಳ ಸಮಸ್ಯೆಗಳ ಬಗೆಹರಿಸುವಲ್ಲಿ ಕಾನೂನು ಹೋರಾಟ ಮಹತ್ವದ್ದು ಆಗಿದ್ದು ಇರುತ್ತದೆ. ಅರಣ್ಯವಾಸಿಗಳು ಭೂಮಿ ಹಕ್ಕಿಗಾಗಿ ಕಾನೂನು ಹೋರಾಟಕ್ಕು ಸಜ್ಜಾಗಬೇಕು, ಬುಡಕಟ್ಟು ಜನಾಂಗದವರಿಗೆ ಅರಣ್ಯ ಭೂಮಿ ಹಕ್ಕು ಕೊಡಲು ಸರ್ಕಾರ ವಿಶೇಷ ಗಮನಹರಿಸಬೇಕೆಂದು ಅವರು ತಿಳಿಸಿದರು.
       ಈ ಸಂದರ್ಭದಲ್ಲಿ ಯಲ್ಲಾಪುರ ಅಧ್ಯಕ್ಷರಾದ ಭೀಮಸೀ ವಾಲ್ಮೀಕಿ, ಮಾಬ್ಲ ಕುಂಡಲಾಕರ್ ಜೋಯಿಡಾ, ರಫೀಕ್ ನಾಗೋಡ, ಮಾಬ್ಲೇಶ್ವರ ಉಳವಿ, ಪ್ರಭಾಕರ್ ವೇಳಿಪ್ ಪ್ರಧಾನಿ, ರತ್ನಾಕರ ಪ್ರಧಾನಿ, ಸಂತೋಷ ಗಾವಡಾ, ಉಳವಿ ಮುಂತಾದವರು ಉಪಸ್ಥತರಿದ್ದರು

ಜೋಯಿಡಾದಲ್ಲಿ  ೩೫೯೪ ಅರ್ಜಿ ತಿರಸ್ಕಾರ:
           ಜೋಯಿಡಾದಲ್ಲಿ ಪುನರ್ ಪರಿಶೀಲಿಸದೇ ೪,೦೭೧ ಅರ್ಜಿಗಳಲ್ಲಿ ೩,೫೯೪ ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಕೇವಲ ೧೧೪ ಅರಣ್ಯವಾಸಿಗಳಿಗೆ ಹಕ್ಕು ಪತ್ರ ದೊರಕಿದೆ ಎಂದು ಉಲ್ಲೇಖಿಸಲ್ಪಟ್ಟಿದೆ ಎಂದು ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0