ಆಪ್ತ ನ್ಯೂಸ್ ಕಾನಸೂರು:
ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಸಿದ್ದಾಪುರ ತಾಲೂಕಿನ ಕೊಡ್ಸರದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಎಣ್ಣೆ ಹಾಗೂ ಹಿಟ್ಟಿನ ಗಿರಣಿಯು ನೂತನವಾಗಿ ಆರಂಭಗೊಂಡಿತು. ಸಂಘದ ಅಧ್ಯಕ್ಷ ಜಿ.ಎಸ್ ಹೆಗಡೆ ಕಂಚಿಕೈ ಹಾಗೂ ಉಪಾಧ್ಯಕ್ಷ ಮಹೇಶ ಭಟ್ಟ ಯಲೂಗಾರ ಗಿರಣಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಎಸ್ ಹೆಗಡೆ ಕಂಚಿಕೈ ನಮ್ಮ ಸೊಸೈಟಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಸಂಘದಲ್ಲಿ ಹಿಟ್ಟು ಹಾಗೂ ಎಣ್ಣೆ ಗಿರಣಿಯನ್ನು ಆರಂಭಿಸಲಾಗಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು , ಮುಖ್ಯಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳು ಇದ್ದರು.