ಪಟೇಲ್ 150 ನೇ ಜನ್ಮದಿನ: ದಾಂಡೇಲಿ ಪೊಲೀಸರಿಂದ ಏಕತಾ ಓಟ
ಆಪ್ತ ನ್ಯೂಸ್ ದಾಂಡೇಲಿ:
ದಾಂಡೇಲಿ ಪೋಲಿಸ್ ಇಲಾಖೆಯ ಡಿ.ವೈ.ಎಸ.ಪಿ ಶಿವಾನಂದ ಮದರಖಂಡಿ ಮುಂದಾಳತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ ರವರ 150 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬೆಳಗ್ಗೆ ಏಕತಾ ಓಟ ಮ್ಯಾರಥಾನ್ ನಡೆಯಿತು.
ಏಕತಾ ಓಟ ವನ್ನು ದಾಂಡೇಲಿ ನಗರದ ಹಳೆ ಮೈದಾನದಿಂದ ಪ್ರಾರಂಭಿಸಿ ಸೋಮಾನಿ ವೃತ್ತ - ಜೆಎನ್ ರಸ್ತೆ -ಬಸ್ ನಿಲ್ದಾಣ- ಪಟೇಲ್ ಸರ್ಕಲ್- ಚೆನ್ನಮ್ಮ ಸರ್ಕಲಕ್ಕೆ ಬಂದು ಹಾಗೂ ಅಲ್ಲಿಂದ ಬರ್ಚಿ ರಸ್ತೆಯ ಮೂಲಕ ಬಾಂಬುಗೆಟ್ -ಸೋಮಾನಿ ವೃತ್ತ ಮೂಲಕವಾಗಿ ಸಾಗಿ ನಗರಸಭೆ ಮೈದಾನಕ್ಕೆ ಬಂದು ಮುಕ್ತಾಯಗೊಳಿಸಲಾಯಿತು. ದಾಂಡೇಲಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಏಕತಾ ಓಟದಲ್ಲಿ ದಾಂಡೇಲಿ ನಗರ ಠಾಣೆಯ ಪಿಎಸ್ಐ ಅಮೀನ್ ಸಾಬ್ ಅತ್ತಾರ್ ಗ್ರಾಮೀಣ ಠಾಣೆಯ ಪಿಎಸ್ಐ ಶಿವಾನಂದ್ ನಾವದಗಿ ಹಾಗೂ ಜಗದೀಶ್ ನಾಯಕ್ ಮತ್ತು ದಾಂಡೇಲಿ ವೃತ್ತದ ಗ್ರಾಮೀಣ ಹಾಗೂ ನಗರ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



