ಕಾರವಾರ ಆಸ್ಪತ್ರೆಯಲ್ಲಿ ಬಡ ರೋಗಿಗಳು ಹಣ ನೀಡುವ ಪರಿಸ್ಥಿತಿ: ಮುಖ್ಯಮಂತ್ರಿಗಳಿಗೆ ಪತ್ರ

Dec 8, 2025 - 21:57
 0  24
ಕಾರವಾರ ಆಸ್ಪತ್ರೆಯಲ್ಲಿ ಬಡ ರೋಗಿಗಳು ಹಣ ನೀಡುವ ಪರಿಸ್ಥಿತಿ: ಮುಖ್ಯಮಂತ್ರಿಗಳಿಗೆ ಪತ್ರ

ಆಪ್ತ ನ್ಯೂಸ್‌ ಕಾರವಾರ:

ಕಾರವಾರ. ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ದಿನಗಳಿಂದ ಬಡರೋಗಿಗಳು  ಶೇ 50 ರಷ್ಟು ವಿವಿಧ ಪರೀಕ್ಷೆಗಳಿಗೆ ಸಾಕಷ್ಟು ಹಣ ನೀಡಬೇಕಾದ  ಪರಿಸ್ಥಿತಿ ನಿರ್ಮಾಣವಾಗಿದೆ.  ಇದ್ದರಿಂದ ಬಡತನ ರೇಖೆಗಿಂತ ಕೆಳಗಿರುವ ಬಿ ಪಿ ಎಲ್ ಕಾರ್ಡುದಾರರಿಗೆ ಕುಟುಂಬಗಳಿಗೆ ಜನಸಾಮಾನ್ಯರಿಗೆ  ಚಿಕಿತ್ಸೆ ಸಾಕಷ್ಟು ಹಣ ಕೈಯಲ್ಲಿ ಇಟ್ಟು ಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಕೂಡಲೇ  ಎಚ್ಚೆತ್ತು ಕೊಂಡು ಬಡವರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ತಾಲ್ಲೂಕ ಅಧ್ಯಕ್ಷ ನರೇಂದ್ರ ತಳೇಕರ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗಳ  ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಹಾಗೂ ಉತ್ತರಕನ್ನಡ ಜಿಲ್ಲಾಧಿಕಾರಿಗಳ  ಮೂಲಕ ಮಾನ್ಯ ಮುಖ್ಯಮಂತ್ರಿಯವರಿಗೆ ಇ ಮೇಲ್ ಮೂಲಕ ಮನವಿ ಸಲ್ಲಿಸಿದರು.


ಕಾರವಾರ  ವೈದ್ಯಕೀಯ ವಿಜ್ಞಾನ  ಸಂಸ್ಥೆ (ಜಿಲ್ಲಾ ಆಸ್ಪತ್ರೆ)ಯಲ್ಲಿ ಬಡ ರೋಗಿಗಳಿಂದ ಶೇ . 50ರಷ್ಟು ವಿವಿಧ ಪರೀಕ್ಷೆಗಳಿಗೆ   ಸಾಕಷ್ಟು ಹಣ ನೀಡಬೇಕಾದ ಪರಿಸ್ಥಿತಿ  ಕಳೆದ ದಿನಗಳಿಂದ ನಿರ್ಮಾಣವಾಗಿದೆ. ಇದ್ದರಿಂದ ದಿನನಿತ್ಯ ದುಡಿದು ತಿನ್ನುವ ಬಡ ಜನರು ರೋಸಿ ಹೋಗಿದ್ದಾರೆ 
ಕಾರವಾರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೋಗಬೇಕೆಂದರೆ   ಕೈಯಲ್ಲಿ  ಸಾಕಷ್ಟು ದುಡ್ಡು ಇಟ್ಟು ಕೊಂಡು ಹೋಗಬೇಕು.  ಬಡವರ ಕೈಯಲ್ಲಿ ದುಡ್ಡು ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗಿ ಸಾವಿನ ಮನೆ ಸೇರುವಂತಾಗಿದೆ. ಬಡ ಜನರು ಸಾಕಷ್ಟು ದುಡ್ಡಿಗೆ ಇಲ್ಲದೇ  ಆಸ್ಪತ್ರೆಗೆ ಕಡೆಗೆ ಮುಖ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಬಡವರು ವಿವಿಧ ವೈದ್ಯಕೀಯ ಪರೀಕ್ಷೆ ಮಾಡಬೇಕೆಂದರೆ  ಬೇರೆಯವರ ಹತ್ತಿರ ಸಾಲ ಪಡೆದು  ರೋಗಿಗಳು ಚಿಕಿತ್ಸೆ ಪಡೆದು ಪರಿಸ್ಥಿತಿ ನಿರ್ಮಾಣವಾಗಿದೆ.
ಬಡ ರೋಗಿಗಳಿಂದ ಶೇ . 50 ರಷ್ಟು ಹಣವನ್ನು ಒತ್ತಾಯಪೂರ್ವಕವಾಗಿ  ಪಡೆದು ಕಾರವಾರ ಜಿಲ್ಲಾ ಆಸ್ಪತ್ರೆಯ ಅಭಿವೃದ್ದಿಗೆ ಬಳಸಿಕೊಳ್ಳುವುದಾಗಿ  ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥರು ಹೇಳಿಕೊಂಡಿದ್ದಾರೆ.  ಬಡತನ ರೇಖೆಗಿಂತ ಕೆಳಗಿರುವ ಬಿ ಪಿ ಎಲ್ ಕಾರ್ಡುದಾರರಿಗೆ  ವೈದ್ಯಕೀಯ ಚಿಕಿತ್ಸೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಬಡವರು ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ಪರೀಕ್ಷೆಗಳಿಗೆ ಶೇ 50 ರಷ್ಟು ಶುಲ್ಕ  ವಿಧಿಸುವ ಹೊಸ ನಿಯಮದಿಂದ ಬಡವರು ದಿನೇ ದಿನೇ ತೊಂದರೆ ಅನುಭವಿಸುವಂತಾಗಿದೆ.
ರಾತ್ರಿ ವೇಳೆ ತುರ್ತು ರೋಗಿಗಳಿಗೆ  ಆಸ್ಪತ್ರೆಗೆ  ಕರೆದುಕೊಂಡು  ಹೋದರೆ  ವೈದ್ಯರು  ಇರುವುದಿಲ್ಲ.
ಮೆಡಿಕಲ್  ವಿದ್ಯಾರ್ಥಿಗಳು ನೋಡಿಕೊಳ್ಳುತ್ತಾರೆ . ಆದ್ದರಿಂದ   ಮಾನ್ಯ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆ ಸಚಿವರು  ಕೂಡಲೇ ಎಚ್ಚೆತ್ತು ಕೊಂಡು ಬಡವರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆಗೆ ಅನುಕೂಲ ಮಾಡಿಕೊಡಬೇಕೆಂದು ಕರವೇ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ  ತಾಲ್ಲೂಕು ಅಧ್ಯಕ್ಷ ನರೇಂದ್ರ ತಳೇಕರ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0