ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಉಚಿತ ಸಂಚಾರಿ ಸಂಜೀವಿನಿ ಆಸ್ಪತ್ರೆ
ಆಪ್ತ ನ್ಯೂಸ್ ಜೋಯಿಡಾ:
ನಮ್ಮ ಸಂಜೀವನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರತಿ ಮಂಗಳವಾರ ಉಳವಿ ಮಾರ್ಗದ ಹೆಣಕೋಳ ಹಾಗೂ ಮಳೆ ಗ್ರಾಮದ ಜನರು ಹಾಗೂ ಪ್ರತಿ ಗುರುವಾರ ಪಣಸೋಲಿ ಮಾರ್ಗದ ಮನಾಯಿ ಗ್ರಾಮದ ಜನರು ನಮ್ಮ ಸಂಜೀವಿನಿ ಸೇವಾ ಸಂಚಾರಿ ವಾಹಿನಿಯ ಸೇವೆಯನ್ನು ತಮ್ಮ ಊರಿಗೆ ನೀಡಬೇಕೆಂದು ಮನವಿ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿದ ಸಂಜೀವಿನಿ ಸೇವಾ ಟ್ರಸ್ಟಿನ ಸದಸ್ಯರು ಹಾಗೂ ಎಲ್ಲಾ ಪದಾಧಿಕಾರಿಗಳು ಸೇರಿ ಸಭೆ ನಡೆಸಿ ಈ ತಿಂಗಳ ಮೊದಲನೆ ವಾರದೊಂದು ಸೇವೆಯನ್ನು ಸಲ್ಲಿಸಲು ಸೂಚಿಸಿದ್ದರು.
ಹೀಗಾಗಿ ಪಣಸೋಲಿ ಮಾರ್ಗದಲ್ಲಿ ಬರುವ ಮನಾಯಿ ಗ್ರಾಮಕ್ಕೆ ತೆರಳಿ ಸೇವೆ ಸಲ್ಲಿಸಲಾಯಿತು. ಈ ವೇಳೆ ಇಲ್ಲಿನ ಜನರು ಸಂಚಾರಿ ವಾಹಿನಿಗೆ ಅದ್ದೂರಿ ಸ್ವಾಗತ ಕೋರಿ ಸಂಜೀವಿನಿ ಸೇವಾ ಟ್ರಸ್ಟಿನ ಸಂಸ್ಥಾಪಕರಾದ ರವೀಂದ್ರ ರೇಡ್ಕರ್ ಹಾಗೂ ಅಧ್ಯಕ್ಷರಾದ ಸುನೀಲ್ ದೇಸಾಯಿ ಹಾಗೂ ಸೆಕ್ರೆಟರಿ ಡಾ.ಜಯಾನಂದ ಡೇರೆಕರ್ ಹಾಗೂ ಎಲ್ಲ ನಮ್ಮ ಟ್ರಸ್ಟಿನ ಪದಾಧಿಕಾರಿಗಳಿಗೆ ಜನರು ಧನ್ಯವಾದಗಗಳನ್ನು ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



