ಸರ್ಕಾರಿ ಬಸ್ಸಿನ ಧೂಮಲೀಲೆಗೆ ಜನಸಾಮಾನ್ಯರು ಹೈರಾಣು
ಆಪ್ತ ನ್ಯೂಸ್ ಯಲ್ಲಾಪುರ:
ಇದೇನು ರಸ್ತೆಯಲ್ಲಿ ಉಗಿಬಂಡಿಯ ಹೊಗೆ ಅಂತ ಕೇಳಬೇಡಿ.ನಿತ್ಯ ಹದಗೆಟ್ಟ ಹೊಂಡದ ರಸ್ತೆಯಲ್ಲಿ ಸಾಗುವಾಗ ಧೂಳು ತಿನ್ನುವುದು ಮಾಮೂಲಿ. ಜೊತೆಗೆ ಇವತ್ತು ಇದೇ ರೀತಿಯಲ್ಲಿ ಇಲ್ಲಿಯ ಸಾರಿಗೆ ಘಟಕದ ಬಸ್ಸೊಂದು ಹೊಗೆ ಉಗುಳುತ್ತಾ ಹೊರಟು ಬೇರೆಯವರು ರಸ್ತೆಯಲ್ಲಿ ಅದೇ ವೇಳೆಗೆ ಸಂಚರಿಸಲಾಗದ ಸ್ಥಿತಿಯಾಗಿತ್ತು.
ಹೌದು ಇವತ್ತು ಮಂಚಿಕೇರಿಯಿಂದ ಯಲ್ಲಾಪುರಕ್ಕೆ ಬರುವ ಬಸ್ಸು ದಾರಿಯುದ್ದಕ್ಕೂ ವಿಪರೀತ ಹೊಗೆ ಉಗುಳುತ್ತಲೇ ಬಂದಿದೆ. ರಸ್ತೆಯಲ್ಲಿ ಸಂಚರಿಸುವವರಿಗೆ ಇದೇನು ಮೋಡವೇ ಮಬ್ಬುಗಟ್ಟಿದೆಯೆನೋ ಅನಿಸುತ್ತಿತ್ತು. ಈ ಹೊಗೆಯ ಮಧ್ಯೆ ಉಳಿದ ವಾಹನ ಸಂಚಾರವೂ ಅಷ್ಟೇ ದುಸ್ತರವಿತ್ತು. ಆದರೆ ಈ ಬಸ್ಸ ಮಾತ್ರ ಒಂದೇ ಸಮನೆ ವಿಪರೀತ ಹೊಗೆ ಸೂಸುತ್ತ ಸಾಗಿತ್ತು. ದುರ್ವಾಸನೆಗೆ ಉಸುರುಗಟ್ಟುತ್ತಿತ್ತು. ಇಂತಹ ಕೆಟ್ಟ ಬಸ್ಸುಗಳು ಈ ಯಲ್ಲಾಪುರ ಘಟಕದಲ್ಲಿವೆ ಎಂಬುದಕ್ಕೆ ತಾಜಾ ಉದಾಹರಣೆ ಇದಾಗಿದೆ.
What's Your Reaction?
Like
0
Dislike
1
Love
0
Funny
0
Angry
1
Sad
0
Wow
0



