ಕಾಜಲವಾಡ ಕಾಡಿನಲ್ಲಿ ನೇಣಿಗೆ ಶರಣಾದ ರಫೀಕ್
ಆಪ್ತ ನ್ಯೂಸ್ ಯಲ್ಲಾಪುರ:
ಯಲ್ಲಾಪುರದ ರಂಜಿತಾ ಹತ್ಯೆ ಆರೋಪಿ ರಫೀಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಲೂಕಿನ ಕಾಜಲವಾಡ ಕಾಡಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಕಾಜಲವಾಡ ಕಾಡಿನಲ್ಲಿ ರಫೀಕನ ಮೃತದೇಹ ಪತ್ತೆಯಾಗಿದೆ.
ರಫೀಕ್ ಶನಿವಾರ ಕಾಳಮ್ಮನಗರದ ರಂಜಿತಾ ಬನ್ಸೊಡೆ (30) ಕೊ*ಲೆ ಮಾಡಿ ಪರಾರಿಯಾಗಿದ್ದ. ಗಾಯಗೊಂಡು ನರಳುತ್ತಿದ್ದ ಮಹಿಳೆಯನ್ನು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಳು. ರಂಜಿತಾಳ ಬಳಿ ಮದುವೆಯಾಗುವಂತೆ ಪೀಡಿಸುತ್ತಿದ್ದ ರಫೀಕ್, ಆಕೆಯ ಕುತ್ತಿಗೆಗೆ ಚಾಕು ಹಾಕಿ ಆಕೆಯನ್ನು ಹತ್ಯೆ ಮಾಡಿದ್ದ.
ರಫೀಕ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ರಫೀಕ್‌ನನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯ ಮಾಡಿದ್ದವು. ಇಂದು ಯಲ್ಲಾಪುರ ಬಂದ್‌ಗೂ ಕರೆ ನೀಡಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



