ಮೌಲ್ಯಾಧಾರಿತ ರಾಜಕಾರಣದ ಧ್ರುವತಾರೆ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ: ಲೇಖನ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

Mar 19, 2026 - 10:24
 0  62
ಮೌಲ್ಯಾಧಾರಿತ ರಾಜಕಾರಣದ ಧ್ರುವತಾರೆ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ: ಲೇಖನ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

ಆಪ್ತ ನ್ಯೂಸ್ ಶಿರಸಿ:

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮುತ್ಸದ್ದಿ ನಾಯಕ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವದ ಅಂಗವಾಗಿ 'ಅಭಿಮಾನ ಸಾಂಸ್ಕೃತಿಕ ವೇದಿಕೆ' ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. 'ಮೌಲ್ಯಾಧಾರಿತ ರಾಜಕಾರಣ', 'ರಾಜಕೀಯದ ಹೊಸ ಬೆಳಕು' ಹಾಗೂ 'ನನ್ನ ನೆಚ್ಚಿನ ರಾಮಕೃಷ್ಣ ಹೆಗಡೆಯವರು' ಎಂಬ ವಿಷಯಗಳ ಕುರಿತು ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಲೇಖಕರು ಉತ್ಸಾಹದಿಂದ ಭಾಗವಹಿಸಿದ್ದರು.

ವಿಜೇತರ ವಿವರಗಳು:

ಈ ಬಾರಿಯ ಸ್ಪರ್ಧೆಯಲ್ಲಿ ಶಿರಸಿಯ ಪ್ರತಿಭೆಗಳು ಮೇಲುಗೈ ಸಾಧಿಸಿದ್ದು, ವಿಜೇತರ ವಿವರ ಹೀಗಿದೆ:

  • ಪ್ರಥಮ ಬಹುಮಾನ: ಶ್ರೀಮತಿ ನಾಗರತ್ನಾ ಹೆಗಡೆ (ಬಾಡಲಕೊಪ್ಪ, ಸೋಂದಾ, ಶಿರಸಿ).

  • ದ್ವಿತೀಯ ಬಹುಮಾನ (ಹಂಚಿಕೆ): 1. ವಿನಾಯಕ ಜಿ. ಭಟ್ಟ (ಬರೂರು, ಶಿರಸಿ).

    2. ಎನ್. ಆರ್. ರೂಪಶ್ರೀ (ಕುವೆಂಪುನಗರ, ಮೈಸೂರು).

    3. ಹರೀಶ ಜಿ. ನಾಯಕ (ಶಿಕ್ಷಕರು, ಕುರ್ಸೆಕಂಪೌಂಡು, ಶಿರಸಿ).

  • ತೃತೀಯ ಬಹುಮಾನ (ಹಂಚಿಕೆ):

    1. ಶ್ರೀಮತಿ ಅಶ್ವಿನಿ ರಾಜೇಂದ್ರ ಹೆಗಡೆ (ಶಿರಸಿಮಕ್ಕಿ, ಶಿರಿಕುಳಿಮನೆ, ಶಿರಸಿ).

    2. ವೀಣಾ ಗಣಪತಿ ಹೆಗಡೆ (ಕೊಮ್ಮಿನಕೈ, ಸಂಪಖಂಡ, ಶಿರಸಿ).

  • ಚತುರ್ಥ ಬಹುಮಾನ (ಹಂಚಿಕೆ):

    1. ಎಂ. ಎನ್. ಹೆಗಡೆ (ಬಳಗಂಡಿ, ಮುಂಡಿಗೇಸರ, ಶಿರಸಿ).

    2. ಶ್ರೀಮತಿ ರಾಜೇಶ್ವರಿ ಹೆಗಡೆ (ಚಿದಂಬರ ನಗರ, ಬೆಳಗಾವಿ).

    3. ಎಂ. ಎಸ್. ಹೆಗಡೆ (ಶಿಕ್ಷಕರು, ಸ್ಥಿತಿಗಾರು, ಹೊನ್ನಾವರ).

ಆಗಸ್ಟ್ 29 ರಂದು ಬಹುಮಾನ ವಿತರಣೆ:

ವಿಜೇತರಿಗೆ ಬಹುಮಾನಗಳನ್ನು ಬರುವ ಆಗಸ್ಟ್ 29, 2026 ರಂದು ಆಯೋಜಿಸಲಾಗುವ ಶ್ರೀ ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ವಿತರಿಸಲಾಗುವುದು ಎಂದು ವೇದಿಕೆ ತಿಳಿಸಿದೆ.

ತೀರ್ಪುಗಾರರಿಗೆ ಅಭಿನಂದನೆ:

ಬಂದ ನೂರಾರು ಲೇಖನಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನ್ಯಾಯ ಒದಗಿಸಿಕೊಟ್ಟ ಶಿರಸಿಯ ಶ್ರೀ ಮಾರಿಕಾಂಬಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ. ಎನ್. ಹೊಸ್ಮನಿ ಹಾಗೂ ತೇಲಂಗ ಪ್ರೌಢಶಾಲೆಯ ನಿವೃತ್ತ ಮುಖ್ಯಧ್ಯಾಪಕರಾದ ಶ್ರೀಧರ ಭಟ್ಟ ಅವರಿಗೆ ಸಂಘಟಕರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

"ರಾಮಕೃಷ್ಣ ಹೆಗಡೆಯವರ ತತ್ವ ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ಯಶಸ್ವಿಯಾಗಿದೆ. ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು," ಎಂದು ಅಭಿಮಾನ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ವಿ. ಎನ್. ಭಾಗ್ವತ ಬರಬಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0