ರಾಜ್ಯಮಟ್ಟದ ಕುಸ್ತಿ ಕ್ರೀಡಾಕೂಟದಲ್ಲಿ ರಾಮನಗರದ ವಿದ್ಯಾರ್ಥಿಗಳ ಸಾಧನೆ

Oct 27, 2025 - 20:24
 0  24
ರಾಜ್ಯಮಟ್ಟದ ಕುಸ್ತಿ ಕ್ರೀಡಾಕೂಟದಲ್ಲಿ ರಾಮನಗರದ ವಿದ್ಯಾರ್ಥಿಗಳ ಸಾಧನೆ

ಆಪ್ತ ನ್ಯೂಸ್ ಜೋಯಿಡಾ:

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದ ರಾಜ್ಯಮಟ್ಟದ ಪ.ಪೂ ಕಾಲೇಜುಗಳ ಕುಸ್ತಿ ಕ್ರೀಡಾಕೂಟದಲ್ಲಿ ಬಿ.ಜಿ.ವಿ.ಎಸ್ ಪ.ಪೂ ಕಾಲೇಜು ರಾಮನಗರದ (ಉ.ಕ)  ಕ್ರೀಡಾ ವಸತಿ ನಿಲಯದ ಪಟುಗಳು ಸಾಧನೆ ಮಾಡಿರುತ್ತಾರೆ.

ಮನಿಷಾ ಜಿ.ಸಿದ್ದಿ -72 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕ ಪಡೆದು  ಹರಿಯಾಣದ  ಪಾಣಿಪತ್ ನಲ್ಲಿ ನವೆಂಬರ್ ನಲ್ಲಿ  ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.

ಗ್ರೀಕೋ ರೋಮನ್ ನಲ್ಲಿ ಅಬುಬಕ್ಕರ್ ಸಲೀಮ್ ನದಾಪ್-60 ಕೆ.ಜಿ  ವಿಭಾಗದಲ್ಲಿ ಬೆಳ್ಳಿಯ ಪದಕ, ಅಮೃತ್ ದುರ್ಗಣ್ಣವರ್-65 ಕೆ.ಜಿ ವಿಭಾಗದಲ್ಲಿ  ಬೆಳ್ಳಿಯ ಪದಕ ಮತ್ತು ಸವಿತಾ ಅಂತೋನ ಸಿದ್ದಿ -57 ಕೆ.ಜಿ ವಿಭಾಗದಲ್ಲಿ  ಕಂಚಿನ ಪದಕ  ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಇವರ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಅಧ್ಯಕ್ಷರು ಶ್ರೀಮತಿ ವನಿತಾ ಪ್ರಭಾಕರ ರಾಣೆ, ಉಲ್ಲಾಸ ನಾಯ್ಕ ಉಪಾಧ್ಯಕ್ಷರು, ಮಂಜುನಾಥ ಪವಾರ್ ಕಾರ್ಯದರ್ಶಿ, ಕಿಶೋರ ರಾಣೆ ಜಂಟಿ ಕಾರ್ಯದರ್ಶಿ. ಗಜೇಂದ್ರ ಗಾಂದಲೆ ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯರು  ಪ್ರೇಮಾನಂದ ಎಸ್.ಪರಬ, ದೈಹಿಕ ಶಿಕ್ಷಣ ಉಪನ್ಯಾಸಕ  ಸಂಜಯ ಜಿ. ಗೌಡ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಶುಭವನ್ನು ಹಾರೈಸಿರುತ್ತಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0