ಶಿವಮೊಗ್ಗದಲ್ಲಿ ರಣಜಿ ಕಲರವ | ಇನ್ನು ನಾಲ್ಕು ದಿನ ಕ್ರಿಕೆಟ್ ಹಬ್ಬ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂದಿನಿಂದ ಕ್ರಿಕೆಟ್ ಕಲರವ ಶುರುವಾಗಿದೆ. ದೇಶಿಯ ಕ್ರಿಕೆಟ್ ನ ಹೆಸರಾಂತ ರಣಜಿ ಟೂರ್ನಿಯ ಕ್ರಿಕೆಟ್ ಪಂದ್ಯ ಶಿವಮೊಗ್ಗದ ನವುಲೆ KSCA ಮೈದಾನದಲ್ಲಿ ನಡೆಯುತ್ತಿದ್ದು ಕರ್ನಾಟಕದ ವಿರುದ್ಧ ಗೋವಾ ತಂಡವು ಸೆಣೆಸುತ್ತಿದೆ.
ಆಪ್ತ ನ್ಯೂಸ್ ಶಿವಮೊಗ್ಗ:
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂದಿನಿಂದ ಕ್ರಿಕೆಟ್ ಕಲರವ ಶುರುವಾಗಿದೆ. ದೇಶಿಯ ಕ್ರಿಕೆಟ್ ನ ಹೆಸರಾಂತ ರಣಜಿ ಟೂರ್ನಿಯ ಕ್ರಿಕೆಟ್ ಪಂದ್ಯ ಶಿವಮೊಗ್ಗದ ನವುಲೆ KSCA ಮೈದಾನದಲ್ಲಿ ನಡೆಯುತ್ತಿದ್ದು ಕರ್ನಾಟಕದ ವಿರುದ್ಧ ಗೋವಾ ತಂಡವು ಸೆಣೆಸುತ್ತಿದೆ.
ಸಾಮಾನ್ಯವಾಗಿ ಪಂದ್ಯವು ೯.೩೦ಕ್ಕೆ ಆರಂಭವಾಗಬೇಕಿತ್ತು. ಆದರೆ ಒಂದು ಗಂಟೆ ಪಂದ್ಯ ತಡವಾಗಿ ಆರಂಭವಾಗಿದೆ. ಖ್ಯಾತನಾಮ ಕ್ರಿಕೆಟಿಗರು ಪಂದ್ಯದಲ್ಲಿ ಆಡುತ್ತಿದ್ದಾರೆ.
ಕರ್ನಾಟಕ ತಂಡದಲ್ಲಿ ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಆಡುತ್ತಿದ್ದಾರೆ. ಅದೇ ರೀತಿ ಗೋವಾ ತಂಡದಲ್ಲಿ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಆಡುತ್ತಿರುವುದು ವಿಶೇಷ.
ಈ ಸಂದರ್ಭದಲ್ಲಿ ಶಾಸಕ ಚೆನ್ನಬಸಪ್ಪ ಮಾತನಾಡಿ, ಎರಡು ತಂಡಗಳು ತಂಡದ ಸ್ಪಿರಿಟ್ ಎತ್ತಿಹಿಡಿಯಿರಿ. ದೇಶಕ್ಕೆ ರಾಜ್ಯಕ್ಕೆ ಕೀರ್ತಿತರುವಂತೆ ಆಡಲು ಶುಭಾಶಯ ಕೋರಿದರು.
ವಾತಾವರಣದ ಹಿನ್ನಲೆಯಲ್ಲಿ 9-30 ಕ್ಕೆ ಆರಂಭವಾಗಬೇಕಿದ್ದ ಪಂದ್ಯಾವಳಿ 10-30 ಕ್ಕೆ ಆರಂಭವಾಗಿದೆ.
ಕರ್ನಾಟಕ ತಂಡ ಇಂತಿದೆ:
ಮಾಯಾಂಕ್ ಅರ್ಗವಾಲ್, ಕರಣ್ ನಾಯರ್, ಸ್ಮರನ್ ಆರ್, ಶ್ರೀಜಿತ್.ಕೆ.ಎಲ್, ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ, ಯಶೋವರ್ಧನ್ ಪರ್ನತಾಪ್, ಅಭಿಲಾಷ್ ಶೆಟ್ಟಿ, ವೆಂಕಟೇಶ್.ಎಂ, ನಿಖಿಲ್ ಜೋಸೆ. ಎಸ್.ಜಿ, ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಅನೀಶ್.ಕೆ.ವಿ, ಮೋಸಿನ್ ಖಾನ್, ಶೇಖರ್ ಶೆಟ್ಟಿ
ಗೋವಾ ತಂಡ ಇಂತಿದೆ:
ದೀಪರಾಜ್ ಗೋವ್ಕರ್, ಲಲಿತ್ ಯಾದವ್, ಸಮರನ್ ದೂದಾಷಿ, ಸುಯಶ್.ಎಸ್, ಮಂತನ್ ಕುಟ್ಕರ್, ಕಶ್ಯಪ್ ಬಾಕಲೆ, ದರ್ಶನ್ ಮಿಸಾಲ್, ಮೋಹಿತ್ ರೆಡ್ಕರ್, ಅಭಿನವ್ ತೇಜರನ್, ಅರ್ಜುನ್ ತೆಂಡೂಲ್ಕರ್, ಇರ್ನಬ್ ಪರ್ನಬ್, ವಿಕಾಸ್ ಸಿಂಗ್, ಇಶಾನ್, ರಾಜಶೇಖರ್ ಹರ್ ಕಾಂತ್, ವಿಜೇಶ್, ವಾಸುಕಿ , ಸ್ನೇಹಲ್ ಇದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



