ಮಹಿಳಾ ವಿಶ್ವಕಪ್: ಭಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ಭಾರತ ಫೈನಲ್ ಗೆ
ಆಪ್ತ ನ್ಯೂಸ್ ಮುಂಬೈ:
ವಿಶ್ವದಾಖಲೆಯ ಮೂಲಕ ಭಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ಭಾರತ ತಂಡವು ಮಹಿಳಾ ವಿಶ್ವಕಪ್ ಫೈನಲ್ ತಲುಪಿತು.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಎದುರಾಳಿಯಾಗಿದ್ದು ಭಲಿಷ್ಠ ಆಸ್ಟ್ರೇಲಿಯಾ ತಂಡ. ಮೊದಲು ಬ್ಯಾಟ್ ಮಡಿದ ಆಸೀಸ್ ವನಿತೆಯರು 338 ರನ್ ಗಳಿಸಿ ಭಾರತಕ್ಕೆ ಭಾರಿ ಗುರಿಯನ್ನು ನೀಡಿದರು. ಆಸೀಸ್ ಪರ ಫಾಬಿ ಲೀಚ್ ಫೀಲ್ಡ್ ೧೧೯ ರನ್ ಹೊಡೆದರೆ, ಆಶ್ಲೇ ಗಾರ್ಡನರ್ ೬೩ ರನ್ ಹೊಡೆದರು.
ಈ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡವು 48.3 ಓವರ್ ನಲ್ಲಿ ೫ ವಿಕೆಟ್ ಗಳಿಸಿಕೊಂಡು ಈ ರನ್ ಚೆಸ್ ಮಾಡಿತು. ಭಾರತದ ಪರ ಜೆಮಿಮಾ ರೊಡ್ರಿಗಸ್ ೧೨೭ ರನ್ ಹೊಡೆದು ಭಾರತ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ ೮೯ ರನ್ ಹೊಡೆದರು.
ವಿಶ್ವದಾಖಲೆ ನಿರ್ಮಿಸಿದ ಭಾರತ ತಂಡ
೩೩೮ ರನ್ ಗುರಿ ಬೆನ್ನು ಹತ್ತಿದ ತಂಡವು ೩೪೧ ರನ್ ಗಳಿಸಿ ಗೆಲುವು ಸಾಧಿಸಿತು. ಮಹಿಳೆಯರ ಹಾಗೂ ಪುರುಷರ ಕ್ರಿಕೆಟ್ ನಲ್ಲಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯಂತ ಹೆಚ್ಚು ರನ್ ಚೆಸ್ ಮಾಡಿದ ವಿಶ್ವದಾಖಲೆಯನ್ನು ಭಾರತದ ವನಿತೆಯರು ಮಾಡಿದರು.
ಇದೀಗ ಭಾರತದ ವನಿತೆಯರು ಫೈನಲ್ ತಲುಪಿದ್ದು, ನವೆಂಬರ್ ೨ ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದಾರೆ.
What's Your Reaction?
Like
1
Dislike
0
Love
1
Funny
0
Angry
0
Sad
0
Wow
1



