ಹೆಗ್ಗಾರ ಪ್ರೀಮಿಯರ್ ಲೀಗ್ ಸೀಸನ್ 2 : ಮಾರಿಕಾಂಬಾ ವಾರಿಯರ್ಸ್ ಚಾಂಪಿಯನ್
ಆಪ್ತ ನ್ಯೂಸ್ ರಾಮನಗುಳಿ:
ಅಂಕೋಲಾ ತಾಲೂಕಿನ ಡೊಂಗ್ರಿ ಪಂಚಾಯತ ವ್ಯಾಪ್ತಿಯ ವೈದ್ಯ ಹೆಗ್ಗಾರಿನಲ್ಲಿ ಮಹಾಗಣಪತಿ ಸ್ಪೋಟ್ಸ್ ಕ್ಲಬ್ ಆಯೋಜಿಸಿದ್ದ ಹೆಗ್ಗಾರ ಪ್ರೀಮಿಯರ್ ಲೀಗ್ ಸೀಸನ್ 2 ರ ಚಾಂಪಿಯನ್ ಆಗಿ ಮಾರಿಕಾಂಬಾ ವಾರಿಯರ್ಸ್ ಹೊರಹೊಮ್ಮಿದರು.
ಹರಾಜಿನ ಮೂಲಕ ಯಲ್ಲಾಪುರ ತಾಲೂಕು ಅಂಕೋಲಾದ ಸುಂಕಸಾಳ, ಡೋಂಗ್ರಿ, ಅಚವೆ ಪಂಚಾಯತ ವ್ಯಾಪ್ತಿಯ ಆಟಗಾರರನ್ನು 8 ಮಾಲಿಕರು ಖರಿದಿಸಿ, ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಈ ಟೂರ್ನಿಯಲ್ಲಿ ರಾಜಶೇಖರ ಭಟ್ಟ ಮಾಲಿಕತ್ವದ ಮಾರಿಕಾಂಬಾ ವಾರಿಯರ್ಸ್ ತಂಡ ಜಯಶಾಲಿಯಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸಚಿನ್ ಬಂಢಾರಿ ಮಾಲಿಕತ್ವದ ಸೂಪರ್ ಸ್ಟೈಕರ್ಸ್ ತಂಡ 56 ರನ್ಗಳ ಗುರಿಯನ್ನು ಕೊಟ್ಟಿತ್ತು. ಆ ಗುರಿಯನ್ನು ಬೆನ್ನೆಟ್ಟಿ ರಾಜಶೇಖರ ಭಟ್ಟ ಮಾಲಿಕತ್ವದ ಮಾರಿಕಾಂಬಾ ವಾರಿಯರ್ಸ್ ತಂಡ ಬ್ಯಾಟಿಂಗ್ ಮಾಡಿ 5 ನೇ ಓವರ್ ನಲ್ಲಿ ಗುರಿಯನ್ನು ಮುಟ್ಟಿತು.
ಕೆಡಿಸಿಸಿ ನೂತನ ನಿರ್ದೇಶಕರಾದ ಬಾಬು ಸುಂಕೇರಿಯವರು ಪಂದ್ಯಾವಳಿ ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿ ಸುರೇಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಭಟ್ಟ, ನರಸಿಂಹ ಭಾಗ್ವತ್, ಮೋಹನ ಪಟಗಾರ, ಮಂಜುಳಾ ಪೆಡ್ನೆಕರ್ ವೇದಿಕೆಯಲ್ಲಿದ್ದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನಾರಾಯಣ ಹೆಗಡೆ ಬಹುಮಾನ ವಿತರಕರಾಗಿ ಮಾತನಾಡಿದರು. ಪ್ರಕಾಶ ಹೆಗಡೆ, ಪ್ರಶಾಂತ ಭಟ್ಟ, ರಾಘವೇಂದ್ರ ಗಾಂವ್ಕರ್, ಅಜಯ್ ಪಾಟಿಲ್ , ಸಚೀನ್, ಮಹೇಶ ನಾಯ್ಕ ವೇದಿಕೆಯಲ್ಲಿದ್ದರು. ಸುಮಂತ ಭಾಗ್ವತ್ ಅವರು ವಂದಿಸಿದರು. ಶಶಾಂಕ ಹಳವಳ್ಳಿ ನಿರ್ವಹಿಸಿದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



