ಸಾವಿರ ರೂಪಾಯಿ ಕೊಡುತ್ತೇವೆ, ನಮ್ಮವರಿಗೂ ಭೂಮಿ ಕೊಡಿ ಕೇಂದ್ರಕ್ಕೆ ಆಗ್ರಹ - ರವೀಂದ್ರ ನಾಯ್ಕ
ಆಪ್ತ ನ್ಯೂಸ್ ಅಂಕೋಲಾ:
ಕೇಂದ್ರ ಸರ್ಕಾರ ಒಂದು ರೂಪಾಯಿಗೆ ಭೂಮಿ ಮತ್ತು ಅದರಲ್ಲಿರುವ ಹದಿನಾರು ಸಾವಿರ ಗಿಡ ಉದ್ಯಮಿಗೆ ಕೊಡುವ ನೀತಿಯಂತೆ, ಅರಣ್ಯವಾಸಿಗಳು ಎಕರೆಗೆ ಒಂದುಸಾವಿರ ರೂಪಾಯಿ ಕೊಡುತ್ತೇವೆ. ನಮ್ಮವರಿಗೂ ಅದೇ ನೀತಿಯಂತೆ ಕೇಂದ್ರ ಸರ್ಕಾರ ಉದಾರ ನೀತಿ ತೋರಿಸಲಿ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕಯ ಅಧ್ಯಕ್ಷ ರವೀಂದ್ರ ನಾಯ್ಕ ಕೇಂದ್ರ ಸರ್ಕಾರರಕ್ಕೆ ಆಗ್ರಹಿಸಿದರು.
ಅವರು ಇಂದು ಅರಣ್ಯವಾಸಿಗಳ ಕಾನೂನು ಜಾಗೃತ ಜಾಥದ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮವನ್ನ, ಅಂಕೋಲ ತಾಲೂಕಿನ ಸ್ವತಂತ್ರ ಭವನದಿಂದÀ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ, ಕಾನೂನು ಜಾಗೃತ ಜಾಥದ ನಂತರ ಸ್ವತಂತ್ರ ಸಂಗ್ರಾಮದ ಭವನದ ಆವಣದಲ್ಲಿ ಜರುಗಿದ ಬೃಹತ್ ಬಹಿರಂಗ ಅರಣ್ಯವಾಸಿಗಳ ಸಭೆನ್ನೂದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಕೇಂದ್ರ ಸರ್ಕಾರವು ಇತ್ತೀಚಿಗೆ ಉದ್ಯಮಿ ಅದಾನಿ ಅವರಿಗೆ ಒಂದು ಸಾವಿರ ಎಕರೆ ಅರಣ್ಯ ಪ್ರದೇಶವನ್ನ ವಾಣೀಜ್ಯ ಕರಣಕ್ಕೆ ಸಾಂಕೇತಿಕ ಒಂದು ರೂಪಾಯಿಗೆ ಒಂದು ಸಾವಿರ ಎಕರೆ ನೀಡಿರುವುದು ಆಶ್ಚರ್ಯಕರ ಸಂಗತಿ ಎಂದು ಹೇಳುತ್ತಾ ದೇಶದ ಅರಣ್ಯವಾಸಿಗಳಿಗೂ ಉದ್ಯಮಿಗಳಿಗೆ ಅರಣ್ಯ ಭೂಮಿ ನೀಡುವ ನೀತಿಯನ್ನು ಅನುಸರಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸರ್ಕಾರವು ಉದ್ಯಮಿಗಳಿಗೆ ನೋಡುವ ದೃಷ್ಟಿಯನ್ನು ಜೀವನಕ್ಕಾಗಿ, ಸಾಗುವಳಿಗಾಗಿ ಅವಲಂಬಿತವಾಗಿರುವ ಅರಣ್ಯವಾಸಿಗಳಿಗೂ ಸಾಮಾಜಿಕ ನ್ಯಾಯದ ಪಾಲನೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಜಾಥದ ಅಂಗವಾಗಿ ಹುಟ್ಟೂರಿನಲ್ಲಿ ಜಾಥ ಸಂಘಟಿಸಿದ ರವೀಂದ್ರ ನಾಯ್ಕ ಅವರಿಗೆ ಅಂಕೋಲ ಅರಣ್ಯವಾಸಿಗಳು ಭವ್ಯವಾಗಿ ಸನ್ಮಾನಿಸಿದರು.
ಸಭೆಯಲ್ಲಿ ಅಂಕೋಲ ಅಧ್ಯಕ್ಷ ರಮಾನಂದ ನಾಯಕ ಅಚವೆ ಸ್ವಾಗತಿಸಿದರು, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು, ಅರವಿಂದ ಗೌಡ ಕೊನೆಯಲ್ಲಿ ವಂದಿಸಿದರು.ಉದಯ ಗುನಗ, ಮಾದೇವ ನಾಯಕ ಅಚವೆ, ಮಾಬ್ಲೇರ‍್ವ ಶೇರುಗಾರ, ಶಂಕರ್ ಕೊಡಿಯಾ, ರಘುಪತಿ ಹೆಬ್ಬಾರ, ಗಣಪತಿ ಉಪ್ಪಾರ, ಗಣಪತಿ ನಾಯ್ಕ, ನರಸಿಂಹ ನಾಯ್ಕ, ಸವಿತಾ ನಾಯಕ, ಮಂಗೇಶ ಗೌಡ, ರೇಣುಕಾ ಸಿದ್ದಿ, ಕೇಶವ ಹರಿಕಂತ್ರ, ವಾಮನ್ ಗೌಡ, ಶ್ರೀಕಾಂತ್ ಗೌಡ, ರಾಮನಾಥ ಗೌಡ, ಪಾಂಡುರAಗ ಗೌಡ, ಶಂಕರ್ ನಾಯ್ಕ, ವಿಜು ಪಿಲ್ಲೆ, ನಾಗರಾಜ ನಾಯ್ಕ, ಸೋಮೇಶ್ವರ ಗೌಡ ಮುಂತಾದವರು ನೇತೃತ್ವವಹಿಸಿದರು.
ಭೂಮಿ ಹಕ್ಕು ಸಂವಿಧಾನ ಭದ್ದ ಹಕ್ಕು:
ದೇಶದ ಪ್ರಜೆಗೆ ಭೂಮಿ ಹಕ್ಕು ನೀಡುವುದು ಅವಶ್ಯವಿದ್ದು, ಅದು ಸಂವಿದಾನ ಭದ್ದ ಹಕ್ಕಾಗಿದೆ ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯದ ಆಧಾರದ ಮೇಲೆ ಭೂಮಿ ವಂಚಿದರಾದವರಿಗೆ ಹಕ್ಕು ಪಡೆಯುವಲ್ಲಿ ಸರ್ಕಾರ ದೃಡ ನಿರ್ದಾರ ಪ್ರಕಟಿಸಬೇಕೆಂದು ಅವರು ಹೇಳಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



