ಒಕ್ಕಲೆಬ್ಬಿಸುವ ಪ್ರಕ್ರಿಯೇ ಕಾನೂನು ಬಾಹಿರ: ಹೈ ಕೋರ್ಟಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ನಿರ್ಧಾರ -ರವೀಂದ್ರ ನಾಯ್ಕ
ಆಪ್ತ ನ್ಯೂಸ್ ಕುಮಟಾ:
ಜಿಲ್ಲಾದ್ಯಂತ ಅರಣ್ಯವಾಸಿಗಳನ್ನ ಅರಣ್ಯ ಇಲಾಖೆಯ ಒಕ್ಕಲೆಬ್ಬಿಸುವ ವಿಚಾರಣಾ ಪ್ರಾಧಿಕಾರದಿಂದ ನೋಟಿಸ್‌ಗಳು ಜಾರಿ ಮಾಡಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುತ್ತಿರುವುದು ಕಾನೂನುಬಾಹಿರ. ಅರಣ್ಯ ಇಲಾಖೆಯ ಕಾನೂನುಬಾಹಿರ ಪ್ರಕ್ರಿಯೆಯನ್ನು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ತಿರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ನ.೧೧ ರಂದು ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯೊAದಿಗೆ ಜರುಗಲಿರುವ ಸಮಾಲೋಚನೆ ಸಭೆಗೆ ಸಂಬAಧಿಸಿ ಕುಮಟಾ ತಾಲೂಕಿನ ಗ್ರೀನ್ ಕಾರ್ಡ ಪ್ರಮುಖರೊಂದಿಗೆ ಸಮಾಲೋಚಿಸುತ್ತಾ ಮೇಲಿನಂತೆ ಹೇಳಿದರು.
ಕರ್ನಾಟಕ ಅರಣ್ಯ ಕಾಯಿದೆಯಲ್ಲಿ ಅನಧೀಕೃತ ಅತಿಕ್ರಮಣದಾರ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಲು ಕಾನೂನಿನಲ್ಲಿ ಅವಕಾಶವಿದೆ. ವಿಚಾರಣೆ ನಂತರ ಅನಧೀಕೃತ ಒತ್ತುದಾರರಿಗೆ ಅತಿಕ್ರಮಿಸಿರುವ ಪ್ರದೇಶ ಅರಣ್ಯ ಇಲಾಖೆಗೆ ಒಪ್ಪಿಸಲು ಆದೇಶದ ದಿನದಿಂದ ೩೦ ದಿನಗಳ ಕಾಲಮಿತಿಗಳಿರುತ್ತದೆ. ಈ ಅವಧಿಯಲ್ಲಿ ಆದೇಶವಾದ ಅರಣ್ಯ ಅತಿಕ್ರಮಣದಾರರು ಇಲಾಖೆಗೆ ಅತಿಕ್ರಮಿಸಿರುವ ಕ್ಷೇತ್ರ ಹಿಂತಿರುಗಿಸದಿದ್ದರೇ ಇಲಾಖೆಯು ಅತಿಕ್ರಮಿಸಿದ ಕ್ಷೇತ್ರ ವಶಪಡಿಸಿಕೊಳ್ಳಲಾಗುವುದು. ಅದಕ್ಕೆ ತಗಲುವ ವೆಚ್ಚ ಅರಣ್ಯವಾಸಿಯೇ ಭರಿಸಲು ಆದೇಶದಲ್ಲಿ ಉಲ್ಲೇಖವಾಗಿರುತ್ತದೆ ಎಂದು ಅವರು ಪ್ರಸ್ತಾಪಿಸಿದರು.
ಸಭೆಯ ಅಧ್ಯಕ್ಷತೆಯನ್ನ ತಾಲೂಕಾಧ್ಯಕ್ಷ ವಿನೋಧ ಮರಾಠಿ ನಾಗೂರು ಸ್ವಾಗತಿಸಿ ಪ್ರಸ್ತಾಪಿಸುತ್ತಾ ನ.೧೧ ರಂದು ಶಿರಸಿಯಲ್ಲಿ ಹಿರಿಯ ಅರಣ್ಯಾಧಿಕಾರಿಯೊಂದಿಗೆ ಜರುಗುವ ಸಮಾಲೋಚನೆ ಸಭೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಅವರು ಹೇಳಿದರು. ಸಭೆಯಲ್ಲಿ ಸೀತಾರಾಮ ನಾಯ್ಕ ಬೋರ್ಗರಿ ಬೈಲ್, ಶಂಕರ ಸುಗ್ಗಿಗೌಡ ಕಂದೊಳ್ಳಿ, ಯೋಗೆಂದ್ರ ಗೌಡ, ಜ್ಯೋತಿ ಗೌಡಿಮಾನಿರ, ಸಾರಂಬಿ, ಕುಲಸುಂಭಿ, ಗಣಪತಿ ಮರಾಠಿ, ಸುನಿಲ್ ಗಣೇಶ ಹರಿಕಂತ್ರ, ಯಾಕುಬ್ ಸಾಬ, ಮುಂತಾದವರು ಉಪಸ್ಥಿತರಿದ್ದರು
ಸಮಾಲೋಚನೆ ಸಭೆ ಶಿರಸಿಯಲ್ಲಿ ನ.೧೧ ಕ್ಕೆ:
ಒಕ್ಕಲೆಬ್ಬಿಸುವ ಪ್ರಕ್ರಿಯೆ ಕುರಿತು ಶಿರಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಮುಂಜಾನೆ ೧೦.೩೦ ಕ್ಕೆ ಸಂಘಟಿಸಲಾಗಿದೆ. ಆಸಕ್ತರು ಆಗಮಿಸಲು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



