ಸರ್ವೆಗೆ ಬಂದರು ಅಪರಿಚಿತರು: ತಡೆದು ವಾಪಾಸ್ ಕಳಿಸಿದ ಸಾಲ್ಕಣಿ-ಮುರೇಗಾರ್ ಜನರು
ಆಪ್ತ ನ್ಯೂಸ್ ಶಿರಸಿ:
ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆ ಹೋರಾಟ ಜೋರಾಗುತ್ತಿದೆ. ಆದರೆ ಇದರ ನಡುವೆಯೇ ಸದ್ದಿಲ್ಲದೇ ಸರ್ವೆ ಕಾರ್ಯ ನಡೆಸುವ ಕೆಲಸವೂ ಜರುಗಿದೆ. ಆದರೆ ಸರ್ವೆಗೆ ಬಂದವರನ್ನು ಸ್ಥಳೀಯರು ಹಿಂದಕ್ಕೆ ಕಳುಹಿಸಿದ ಕಾರ್ಯವೂ ನಡೆದಿದೆ.
ಸದ್ದಿಲ್ಲದೇ ಸರ್ವೆ ಕಾರ್ಯ ಮುಗಿಸುವ ಹುನ್ನಾರದಲ್ಲಿರುವ ಸರ್ಕಾರ, ಹಿತ್ತಿಲ ಬಾಗಿಲಿನಿಂದ ಯೋಜನೆಯ ರೂಪುರೇಷೆ ನಡೆಸಲು ಮುಂದಾದಂತಿದೆ. ಭೂಗರ್ಭ ಇಲಾಖೆಯ ಗಣಿಗಾರಿಕೆ ವಿಭಾಗದ ವತಿಯಿಂದ ಶಿರಸಿ ತಾಲೂಕಿನ ಮುರೆಗಾರು ರಸ್ತೆಯಲ್ಲಿ ಕೆಲವು ಅಪರಿಚಿತರು ಸರ್ವೆಗೆ ಬಂದಿದ್ದರು. ಇವರನ್ನು ತಡೆದು ಪ್ರಶ್ನಿಸಿದ ನೂರಕ್ಕೂ ಹೆಚ್ಚು ಸ್ಥಳೀಯ ನಾಗರಿಕರು ಸಮಿತಿಯವರು, ಗ್ರಾಮಪಂಚಾಯತಿಯ ಅಧ್ಯಕ್ಷರು ಊರಿನ ಪ್ರಮುಖರು ಸರಿಯಾದ ಮಾಹಿತಿಯನ್ನು ಕೊಡಬೇಕೆಂದು ಆಗ್ರಹಿಸಿ ಶಾಂತಿಯುತವಾಗಿ ವಿನಂತಿಸಿದ್ದಾರೆ.
ಮುರೇಗಾರ್ ಹಾಗೂ ಸಾಲ್ಕಣಿ ಭಾಗದಲ್ಲಿ ಸ್ಥಾನೀಯ ಆಡಳಿತ ವ್ಯವಸ್ಥೆಗೆ ಯಾವುದೆ ಅಧಿಕೃತ ಮಾಹಿತಿ ಇಲ್ಲದೆ ಬಂದಿರುವದರಿಂದ ಸರ್ವೆಗೆ ಬಂದವರನ್ನು ಹಿಂದಕ್ಕೆ ಕಳಿಸಿದ್ದಾರೆ.
ಈ ಹಿಂದೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತಂತೆ ಗೇರುಸೊಪ್ಪಾ ಭಾಗದಲ್ಲಿ ಕೂಡ ಒಂದಿಷ್ಟು ಅಪರಿಚಿತರು ಸರ್ವೆಗೆ ಬಂದಿದ್ದರು. ಆ ಸಂದರ್ಭದಲ್ಲಿಒಯೂ ಸ್ಥಳೀಯರು ಅವರನ್ನು ತಡೆದು ವಾಪಾಸು ಕಳಿಸಿದ್ದರು. ಇದೀಗ ಶಿರಸಿ ತಾಲೂಕಿನಲ್ಲಿಯೂ ಸರ್ವೆಗೆ ಬಂದಿದ್ದ ಅಪರಿಚಿತರನ್ನು ವಾಪಾಸು ಕಳಿಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯ ಮಾಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



