ಮನೆಯಲ್ಲಿ ಅಡಗಿಸಿದ್ದ ಶ್ರೀಗಂಧ ಜಪ್ತಿ – ಆರೋಪಿ ಪರಾರಿ

Dec 3, 2025 - 10:37
 0  92
ಮನೆಯಲ್ಲಿ ಅಡಗಿಸಿದ್ದ ಶ್ರೀಗಂಧ ಜಪ್ತಿ – ಆರೋಪಿ ಪರಾರಿ

ಆಪ್ತ ನ್ಯೂಸ್‌ ಮುಂಡಗೋಡ:

ಮುಂಡಗೋಡ ವಲಯದ ಇಂದೂರ ಶಾಖೆ, ನಂದಿಕಟ್ಟಾ ಬೀಟ್ ವ್ಯಾಪ್ತಿಯ ಅಗಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ದಳ್ಳಿಯಲ್ಲಿ, ಮನೆಯಲ್ಲಿ ಅಡಗಿಸಿಟ್ಟಿದ್ದ ದೊಡ್ಡ ಪ್ರಮಾಣದ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧಾರಿಸಿ ಮಂಗಳವಾರ ಬೆಳಗಿನ ಜಾವ ಪರಶುರಾಮ ಲೋಕಪ್ಪ ಲಮಾಣಿ ಅವರ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿದರು. ಈ ವೇಳೆ ನಾಲ್ಕು ಗೋಣಿಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 60–70 ಕೆ.ಜಿ ಶ್ರೀಗಂಧ ತುಂಡುಗಳು ಪತ್ತೆಯಾಗಿ ಜಪ್ತಿಗೊಂಡಿವೆ. ಆದರೆ ದಾಳಿಯ ವೇಳೆ ಆರೋಪಿಯು ಸ್ಥಳದಲ್ಲಿರದೇ, ಹತ್ತಿರದ ಕಬ್ಬಿನ ಗದ್ದೆಗೆ ಓಡಿ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.

ಅಕ್ರಮವಾಗಿ ಶ್ರೀಗಂಧ ದಾಸ್ತಾನು ಮಾಡಿಕೊಂಡಿದ್ದಕ್ಕಾಗಿ ಆರೋಪಿಯ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿನ ಕೆಲ ತಿಂಗಳಿನಿಂದ ಮುಂಡಗೋಡ ತಾಲೂಕಿನ ಹಲವು ಭಾಗಗಳಲ್ಲಿ ಶ್ರೀಗಂಧ ಕಳ್ಳತನ ಪ್ರಕರಣಗಳು ಸಂಭವಿಸುತ್ತಿರುವ ಹಿನ್ನೆಲೆ, ಈ ಪ್ರಕರಣವನ್ನು ಸಂಪರ್ಕಿಸಿ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಆರ್‌ಎಫ್‌ಒ ಅಪ್ಪಾರಾವ್ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0