ಸರಸ್ವತಿ ರವಿಗೆ ನಾಲ್ಕೇ ಮತ
ಆಪ್ತ ನ್ಯೂಸ್ ಶಿರಸಿ:
ಕೆನರಾ ಡಿಸಿಸಿ ಬ್ಯಾಂಕ್ ಗೆ ಸ್ಪರ್ಧಿಸಿರುವ ಮೊದಲ ಮಹಿಳಾ ಅಭ್ಯರ್ಥಿ, ಸ್ವತಂತ್ರ ಅಭ್ಯರ್ಥಿ ಎಂದೆಲ್ಲ ಬಿಂಬಿಸಿಕೊಂಡಿದ್ದ ಸರಸ್ವತಿ ರವಿ ಅವರಿಗೆ ನಾಲ್ಕೇ ನಾಲ್ಕು ಮತಗಳು ಬಿದ್ದಿವೆ.
ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸೌಹಾರ್ದ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಹಾಲಿ ಬ್ಯಾಂಕಿನ ಉಪಾಧ್ಯಕ್ಷ ಮೋಹನದಾಸ ನಾಯಕ ಹಾಗೂ ಮೋಹನ ನಾಯಕ ದೇವರಬಾವಿ ಎದುರು ಸರಸ್ವತಿ ಸ್ಪರ್ಧಿಸಿದ್ದರು.
ಸರಸ್ವತಿ ಅವರ ಪರವಾಗಿ ಸಾಕಷ್ಟು ಜನರು ಹೇಳಿಕೆ ನೀಡುವ ಮೂಲಕ ಹೈಪ್ ಸೃಷ್ಟಿಸುವ ಪ್ರಯತ್ನ ನಡೆದಿತ್ತು. ಅಷ್ಟೇ ಅಲ್ಲದೆ ಮಾಧ್ಯಮಗಳಲ್ಲೆಲ್ಲ ವಾರಗಟ್ಟಲೆ ಲೇಖನಗಳನ್ನು ಬರೆಸಿ ಪ್ರಚಾರ ಮಾಡಲಾಗಿತ್ತು ಎನ್ನುವುದು ವಿಶೇಷ.
ನ್ಯಾಯಾಲಯದ ವ್ಯಾಪ್ತಿಯಲ್ಲಿ ಫಲಿತಾಂಶ!
ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸೌಹಾರ್ದ ಸಹಕಾರಿ ಸಂಘಗಳ ಮತಕ್ಷೇತ್ರದ 47 ಮತಗಳು ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದು ಫಲಿತಾಂಶಕ್ಕಾಗಿ ಕಾಯುವುದು ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



