ದುರಂತ ಛಾಯೆಯ ನಡುವೆ ಕರಾವಳಿ ಉತ್ಸವ ಬೇಕೆ?
ಆಪ್ತ ನ್ಯೂಸ್ ಕಾರವಾರ:
ಚಿತ್ರದುರ್ಗದಲ್ಲಿ ಭೀಕರ ದುರಂತ ಸಂಭವಿಸಿದೆ. ಲಾರಿ-ಬಸ್ ಡಿಕ್ಕಿಯಾಗಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರಲ್ಲಿ ಗೋಕರ್ಣದವರೂ ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಒಂದೆಡೆ ಜಿಲ್ಲೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಭೀಕರ ಅಪಘಾತ ಸಂಭವಿಸಿ ಜಿಲ್ಲೆಯ ಜನರು ಮೃತಪಟ್ಟಿದ್ದರೆ, ಇನ್ನೊಂದು ಕಡೆ ಕರಾವಳಿ ಉತ್ಸವ ನಡೆಯುತ್ತಿರುದು ಎಷ್ಟು ಸರಿ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಅಪಘಾತಕ್ಕೀಡಾಗಿ ಹೊತ್ತಿ ಉರಿದ ಜೀವಗಳನ್ನು ಬಲಿ ಪಡೆದ ಬಸ್ ಗೋಕರ್ಣಕ್ಕೆ ಬರುತ್ತಿತ್ತು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕರು ಕುಮಟಾ, ಗೋಕರ್ಣಕ್ಕೆ ಬರುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯ ಜೀವಗಳು ಅಪಘಾತದಲ್ಲಿ ಬಲಿಯಾದ ಬೇಜಾರು ಒಂದು ಕಡೆಯಾದರೆ, ಗೋಕರ್ಣಕ್ಕೆ ಹತ್ತಿರದಲ್ಲೇ ಇರುವ ಕಾರವಾರದಲ್ಲಿ ಕರಾವಳಿ ಉತ್ಸವದ ಸಂಭ್ರಮ, ಸಡಗರ ಮೇರೆ ಮೀರುತ್ತಿದೆ. ಬೇಜಾರಿನ ನಡುವೆ ಸಂಭ್ರಮದ ಉತ್ಸವ ಬೇಕೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಕರಾವಳಿ ಉತ್ಸವವನ್ನು ಕೆಲವು ದಿನಗಳ ವರೆಗೆ ಮುಂದೂಡಿದರೆ ಚೆನ್ನಾಗಿತ್ತು ಎನ್ನುವ ಮಾತುಗಳೂ ಕೂಡ ಕೇಳಿ ಬಂದಿದೆ.
ಅಪಘಾತಕ್ಕೀಡಾದ ಬಸ್ಸಿನಲ್ಲಿ ಯಾರೆಲ್ಲ ಇದ್ರು
ಆನಂದರಾವ್ ಸರ್ಕಲ್ ಪ್ಯಾಸೆಂಜರ್ಸ್ ಬಸ್ ಮುಂದೆ ಆನಂದರಾವ್ ಸರ್ಕಲ್ ಕಡೆ ಬಂದಾಗ ಅಲ್ಲಿ ಮೂರು ಜನ ಬಸ್ ಹತ್ತಿದ್ದಾರೆ. ಅನಿರುದ್ಧ್ ಬ್ಯಾನರ್ಜಿ (Anirudh banerjee) , ಅಮೃತಾ (Amruta) ಮತ್ತು ಇಶಾ (Isha) ಇಲ್ಲಿಂದ ಜರ್ನಿ ಶುರು ಮಾಡಿದ್ರು. ಇವರೆಲ್ಲರೂ ಸ್ಲೀಪರ್ ಬಸ್‌ನ ಅಪ್ಪರ್ ಬರ್ತ್ ಬುಕ್ ಮಾಡಿದ್ರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



