ನಕಲಿ ಪತ್ರಕರ್ತರ ಹಾವಳಿಗೆ ಕಂಗೆಟ್ಟ ಶಿರಸಿ ನಗರಿ! ಹುಳಿಅಪ್ಪೆ ಮರದ ಜೊತೆಗೆ ಭೂಮಿರಾಜನ ಕಾಟ!

Oct 26, 2026 - 22:19
 0  14
ನಕಲಿ ಪತ್ರಕರ್ತರ ಹಾವಳಿಗೆ ಕಂಗೆಟ್ಟ ಶಿರಸಿ ನಗರಿ! ಹುಳಿಅಪ್ಪೆ ಮರದ ಜೊತೆಗೆ ಭೂಮಿರಾಜನ ಕಾಟ!

ಶಿರಸಿಯಲ್ಲಿ ನಕಲಿ ಪತ್ರಕರ್ತರ ಹಾವಳಿ ಜಾಸ್ತಿಯಾಗಿದ್ದು, ಜಾಲತಾಣದಲ್ಲಿ ದಿನಕ್ಕೊಂದು ಹೆಸರಿನಲ್ಲಿ ಖಾತೆ ಸೃಷ್ಠಿಯಾಗುತ್ತಿದೆ. ಒಂದೇ ಬಟ್ಟಲಿನಲ್ಲಿ ಊಟ ಮಾಡುತ್ತಿದ್ದ ಹುಳಿಅಪ್ಪೆ ಹಾಗೂ ಅಶ್ವಮೇದದ ನಡುವೆ ಪಾಲು ಪಡೆಯುವ ವಿಷಯದಲ್ಲಿ ಜಗಳವಾಗಿದ್ದು, ಅವರಿಬ್ಬರ ನಡುವೆ ಬಿನ್ನಾಬಿಪ್ರಾಯ ಮೂಡಿದೆ.

ಶಿರಸಿಯಲ್ಲಿ ಕೆಲ ವರ್ಷಗಳಿಂದ ಭೂಮಿರಾಜನ ಓಟ ಜೋರಾಗಿದೆ. ಕುದುರೆಮೇದ, ಚೇಳು ಎಂಬ ಹೆಸರಿನ ಅಡಿ ಪೃಥ್ವಿಯ ಎಲ್ಲಾ ವಿಷಯ ಬರೆಯುವ ವಾಟ್ಸಪ್ ವೀರನ ಜೊತೆ ಈಚೆಗೆ ಹುಟ್ಟಿಕೊಂಡ ಹಲವು ಹಗರಣಗಳ ರುವಾರಿ ಹುಳಿಅಪ್ಪೆಯೂ ಕೈ ಜೋಡಿಸಿ ಮೇಯುವ ಕೆಲಸ ಮಾಡಿದ್ದು, ಅವರ ಕೆಲಸಕ್ಕೆ ಪರಿವಾರದಲ್ಲಿನ ಒಡಕು ಹುಳಿನಿಂಬೆಯಾಗಿದೆ. ಮೊದಲು ಒಂದೇ ವಿಷಯದ ಬಗ್ಗೆ ಒಟ್ಟಿಗೆ ಕೂತು ಬರೆಯುತ್ತಿದ್ದ ಆ ಇಬ್ಬರು ಇದೀಗ ಪರಸ್ಪರ ಕೆಸರಾಟ ನಡೆಸುತ್ತಿರುವುದು ಜನರಿಗೆ ಮುಖ್ಯ ಮನರಂಜನೆಯಾಗಿದೆ. ಅವರಿಬ್ಬರ ಕಚ್ಚಾಟದಲ್ಲಿ ಅವರ ಗುಂಪಿನಲ್ಲಿಯೇ ಇದ್ದು ಬೇಳೆ ಬೇಯಿಸಿಕೊಳ್ಳುತ್ತಿದ್ದ ಅನೇಕ ನಕಲಿ ಪತ್ರಕರ್ತರ ಮುಖವಾಡವೂ ಬಯಲಾಗುತ್ತಿದೆ.

ಶಿರಸಿಯಲ್ಲಿ ತಿರುಪತಿ ನಾಮ ಪತ್ರಕರ್ತನ ಹಾವಳಿ ಹೆಚ್ಚಾಗಿದ್ದು, ಪ್ರಶಾಂತ ವಾತಾವರಣದಲ್ಲಿ ಇಂದು ಒಂದು ಹೊಸ ಜಾತಿಯ 'ಉಪದ್ರವಕಾರಿ ಜೀವಿಗಳು' ಸದ್ದಿಲ್ಲದೆ ಅಂದರೆ ಸದ್ದು ಮಾಡುತ್ತಲೇ ಪ್ರತ್ಯಕ್ಷವಾಗಿವೆ. ಯಾವುದೇ ಪತ್ರಿಕೆಯ ಗೇಟ್ ಕಾವಲು ಕಾಯಲೂ ಯೋಗ್ಯತೆಯಿಲ್ಲದವರು, ಇಂದು ಮೂರು ಲೋಕಗಳನ್ನೂ ಮೀರಿಸುವಂತೆ ವಾಟ್ಸಾಪ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳಲ್ಲಿ ಏಕಕಾಲಕ್ಕೆ  ಸುದ್ದಿ ಹಾಕಿ ಬಿಲ್ಡಪ್ ಕೊಡುವುದನ್ನು ನೋಡಿದರೆ, ನಗಬೇಕೋ ಅಥವಾ ಅಳಬೇಕೋ ತಿಳಿಯದಂತಾಗಿದೆ. ಯಾವುದೇ ದಿನಪತ್ರಿಕೆಯ ಕನಿಷ್ಠ ಕೆಲಸ ಮಾಡಿರುವ ಅನುಭವ ಜ್ಞಾನವಿಲ್ಲದವರು, ತಾವು ಯಾವುದೋ ಅಗಾಧ ಪ್ರಸಾರವಿರುವ ಮಹಾಪತ್ರಿಕೆಯ ಅಧಿಪತಿಗಳಂತೆ ಬಿಂಬಿಸಿಕೊಳ್ಳುವುದು ಆಧುನಿಕ ಕಾಲದ ದೊಡ್ಡ ವಿಪರ್ಯಾಸ. ಇವರ ಕೈಯಲ್ಲಿ ಪತ್ರಿಕೆಯ ಬದಲು ಲಟಾರಿ ಮೊಬೈಲ್ (ಪುಕ್ಕಟ್ಟೆ ಸಿಕ್ಕಿದಿದ್ರೂ) ಸಿಕ್ಕ ಬಳಿಕ, ಶಿರಸಿಯಲ್ಲಿ ಹೊಸ ಮಳಿಗೆಯೋ, ಶೋರೂಮೋ ತೆರೆದರೆ ಸಾಕು - ಅಲ್ಲಿಗೆ ನಂದೇಡ್ಲಿಯ ನಂದಕುಮಾರನಂತೆ ನುಗ್ಗಿಬಿಡುತ್ತಾರೆ!

"ನಿಮ್ಮ ಬಳಿ ಲೈಸನ್ಸ್ ಇದೆಯಾ? ಕಾಗದಪತ್ರ ಸರಿಯಾಗಿದೆಯಾ?" ಎಂದು ಅಧಿಕಾರಿಯಂತೆ ಒನ್‌ಟು ಆಲ್ ಚೆಕ್ ಮಾಡುವ ನಾಟಕವಾಡಿ, ಜೇಬು ತುಂಬಿಸಿಕೊಳ್ಳುವುದೇ ಇವರ ಏಕೈಕ ಮತ್ತು ಅಂತಿಮ ಉದ್ದೇಶ. ಮಾರ್ವಾಡಿ ಕಾಸು ಮತ್ತು 'ಮಿಂಗಿಸ್ ಗ್ಯಾಂಗ್' ವಸೂಲಿ ದಂಧೆ
ಕಷ್ಟಪಟ್ಟು ವ್ಯಾಪಾರ ಮಾಡುವವರನ್ನು ಬೆದರಿಸಿ ಹಣ ಪೀಕುವುದೇ ಇವರ ನಿತ್ಯ ಕಾಯಕ. ಮಾರ್ವಾಡಿಗಳ ಅಂಗಡಿಗಳ ಮುಂದೆ ನಿಂತು ಐದು ಲಕ್ಷದವರೆಗೆ ಹಣ ಎಬ್ಬಿಸಿ, ಜೇಬಿಗೆ ಇಳಿಸಿಕೊಂಡು ಮೆರೆಯುವ ಇವರ ತಿರುಮಲೈ ಸಾಮಿ ಅವತಾರ ಅಸಹ್ಯ ಹುಟ್ಟಿಸುತ್ತದೆ. ಇನ್ನು ಇವರಿಗೆ ಸಾಥ್ ನೀಡಲು 'ಮಿಂಗಿಸ್ ಗ್ಯಾಂಗ್' ಬೇರೆ ಇದೆ! ಸತ್ಯ-ನ್ಯಾಯಗಳ ಹಾದಿಬಿಟ್ಟು, ಬೆಟ್ಟದಂತಹ ಬಳಕೆದಾರರನ್ನು ಕಂಡಕಂಡಲ್ಲಿ ಹೆದರಿಸುವುದು ಮತ್ತು ಅರಣ್ಯವಿಲಾಖೆಯವನ್ನು ಬ್ಲ್ಯಾಕ್‌ಮೇಲ್ ಮಾಡಿಕೊಂಡೇ ಬದುಕು ಸಾಗಿಸುತ್ತಿರುವ ಈ ಹಳೆ ಇಲಿಗಳಿಗೆ ನಾಚಿಕೆ ಎಂಬುದು ಮೈಮೇಲೆ ಮೂರನೇ ಕೈ ಇದ್ದ ಹಾಗೆ!

ಸುಮಾರು ವರ್ಷಗಳ ಹಿಂದೆ ಶಿರಸಿಯ ಭಕ್ತಿ ಸ್ಥಳದ ಬಗ್ಗೆ ಯಗ್ಗಾ ಮಗ್ಗಾ ತಿಂದ ತಿರುಪತಿ ನಾಮನಿಗೆ ಬುದ್ಧಿ ಮಾತ್ರಬಂದೇ ಇಲ್ಲ. ಈಗೊಂದು ಸ್ವಲ್ಪ ದಿನಗಳ ಹಿಂದೆ ಶಿರಸಿಯ ಪ್ರತಿಷ್ಠಿತ ಸೊಸೈಟಿ ಬಗ್ಗೆ ಬರೆದು ಕೇಸ್ ಜಡಿಸಿಕೊಂಡ ಈತನಿಗೆ ಮರ್ಯಾದೆ ಎಂಬುದು ಮೂರು ಕಾಸಿಗೂ ಇಲ್ಲ. ಯಾವ ಪತ್ರಿಕೆಯಲ್ಲೂ ಇಲ್ಲದೆ ಕೇವಲ ವಾಟ್ಸಪ್ , ಫೇಸ್ ಬುಕ್ಕಿಗೆ ಸುದ್ದಿ ಹಾಕಿ ದರ್ಬಾರಿನ ಜೀವನ ನಡೆಸುವ ಈ ನಕಲಿ ಪರ್ತಕರ್ತನಿಗೆ ಕಾಸು ಎಲ್ಲಿಂದ ಬರುತ್ತದೆ? ಎಂಬುದು ನಿಯತ್ತಾಗಿ ಇರಯವ ಪತ್ರಕರ್ತರಿಗೆ ನಿತ್ಯದ ಪ್ರಶ್ನೆಯಾಗಿದೆ.

ವಾಟ್ಸಾಪ್ ಗ್ರೂಪ್‌ಗಳಿರಲಿ ಅಥವಾ ಯೂಟ್ಯೂಬ್ ಚಾನೆಲ್‌ಗಳಿರಲಿ - ಎಲ್ಲೆಡೆ ಇವರದ್ದೇ ಹಾವಳಿ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಾದ ಮಾಧ್ಯಮ ಕ್ಷೇತ್ರವನ್ನು ಇಂತಹ ನಕಲಿ ಕಲಿಗಳು ತಮ್ಮ ಹೊಟ್ಟೆಪಾಡಿನ ಭಿಕ್ಷಾಟನೆಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇವರ ಈ ಡಿಜಿಟಲ್  ಪುರಾಣವನ್ನು ಕಂಡು ಶಿರಸಿಯ ಜನಸಾಮಾನ್ಯರು ನಿಜಕ್ಕೂ ತಲೆಮೇಲೆ ಕೈಹೊತ್ತುಕೊಂಡು ಕೂರುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಹಲವು ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಪ್ಪೆಹುಳಿಯೂ ಫೇಸ್ಬುಕ್ ಪೇಜ್ ಮೂಲಕ ಮೀಡಿಯಾ ರಚಿಸಿಕೊಂಡಿದ್ದು, ಈಗಾಗಲೇ ಅನೇಕ ಬಾರಿ ಕಡುಬು ತಿಂದಾಗಿದೆ. ನಗರಸಭೆ ಮಾಜಿ ಅಧ್ಯಕ್ಷರ ಬಗ್ಗೆ ಬರೆದು ಮತ್ತೆ ಒದೆ ಬಿದ್ದಿದ್ದು, ಅದಾಗಿಯೂ ಹಳೆಯ ಚಾಳಿ ಬಿಡುವ ಹಾಗಿಲ್ಲ. ಸ್ವಸ್ತಿಕ ಆಕಾರದ ಅಪ್ಪೆಹುಳಿಯಲ್ಲಿ ಬರುವುದೆಲ್ಲ ಸತ್ಯವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಮಾಧ್ಯಮದ ಪವಿತ್ರ ಕ್ಷೇತ್ರಕ್ಕೆ ಕಪ್ಪುಚುಕ್ಕೆ ಇಟ್ಟಿರುವ ಇಂತಹ ನಕಲಿ ಪತ್ರಕರ್ತರ ಮುಖವಾಡವನ್ನು ಸಮಾಜದ ಮುಂದೆ ಬಯಲು ಮಾಡುವ ಸಮಯ ಈಗ ಬಂದಿದೆ!

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0