ಶಿರಸಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ: 43 ಕೆಜಿ ಗೋಮಾಂಸ ವಶ, ವಾಹನ ಜಪ್ತಿ
ಆಪ್ತ ನ್ಯೂಸ್ ಶಿರಸಿ:
ಅಕ್ರಮವಾಗಿ ಗೋಮಾಂಸ ಸಾಗಿಸಲಾಗುತ್ತಿದ್ದ ಪ್ರಕರಣವನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪತ್ತೆ ಹಚ್ಚಿ, 43 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡು ವಾಹನವನ್ನು ಜಪ್ತಿ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಶಿರಸಿ–ಚಿಪಗಿ ಚೆಕ್‌ಪೋಸ್ಟ್ ಬಳಿ ಶಂಕಾಸ್ಪದವಾಗಿ ಸಂಚರಿಸುತ್ತಿದ್ದ ಮಾರುತಿ ಓಮ್ನಿ ವಾಹನಕ್ಕೆ ಪೊಲೀಸರು ನಿಲ್ಲಿಸುವಂತೆ ಸೂಚಿಸಿದಾಗ, ಚಾಲಕ ವಾಹನ ನಿಲ್ಲಿಸದೆ ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ವಾಹನವನ್ನು ಬೆನ್ನತ್ತಿ, ಶಿರಸಿ–ಬನವಾಸಿ ರಸ್ತೆಯ ಕಬ್ಬೆ ಸಮೀಪ ವಾಹನವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವಾಹನ ತಪಾಸಣೆ ವೇಳೆ 43 ಕೆಜಿ ಗೋಮಾಂಸ, ಜೊತೆಗೆ ₹20,000 ನಗದು ಹಣ ಪತ್ತೆಯಾಗಿದ್ದು, ಮಾಂಸ ಸಾಗಿಸಲಾಗುತ್ತಿದ್ದ ಮಾರುತಿ ಓಮ್ನಿ (KA 51 MH 1130) ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ, ಈ ಗೋಮಾಂಸವನ್ನು ಕಾರ್ಯಕ್ರಮವೊಂದಕ್ಕೆ ಸಾಗಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದು ತನಿಖೆ ತೀವ್ರಗೊಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



