ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶಿರಸಿಗೆ ಹೆಮ್ಮೆ ತಂದ ಮಕ್ಕಳು ಇವರೇ ನೋಡಿ

Apr 23, 2026 - 13:33
 0  162
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶಿರಸಿಗೆ ಹೆಮ್ಮೆ ತಂದ ಮಕ್ಕಳು ಇವರೇ ನೋಡಿ

ಆಪ್ತ ನ್ಯೂಸ್ ಶಿರಸಿ:
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಕೆಳಗಿನ ಶಾಲೆಗಳು ಹಾಗೂ ಈ ಎಲ್ಲ ಮಕ್ಕಳು ಉತ್ತಮ ಅಂಕ ಪಡೆದು ಶಾಲೆಗೆ ಹಾಗೂ ಶಿರಸಿಗೆ ಹೆಮ್ಮೆಯನ್ನು ತಂದಿದ್ದಾರೆ. ಆ ವಿವರಗಳು ಇಲ್ಲಿದೆ ನೋಡಿ


ಚಂದನ ಆಂಗ್ಲ ಮಾಧ್ಯಮ ಶಾಲೆಯ 'ಶೈಕ್ಷಣಿಕ ದಿಗ್ವಿಜಯ': ಸತತ 14ನೇ ಬಾರಿಗೆ 100% ಫಲಿತಾಂಶ, ರಾಜ್ಯ ಮಟ್ಟದಲ್ಲಿ ಮೂವರು ಸಾಧಕರು!

 

ಕೇವಲ ಅಂಕಗಳಿಕೆಯಲ್ಲ, ಜ್ಞಾನದ ಗಣಿಯಾಗಿ ಹೊರಹೊಮ್ಮುತ್ತಿರುವ ಶಿರಸಿಯ ಪ್ರತಿಷ್ಠಿತ ಚಂದನ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಶಾಲೆಯು ಸತತ 14ನೇ ವರ್ಷವೂ 100% ಫಲಿತಾಂಶ ದಾಖಲಿಸುವ ಮೂಲಕ ತನ್ನ ಶೈಕ್ಷಣಿಕ ಗುಣಮಟ್ಟದ ಪರಂಪರೆಯನ್ನು ಉಳಿಸಿಕೊಂಡಿದೆ.

ರಾಜ್ಯ ಮಟ್ಟದ ರ‍್ಯಾಂಕ್‌ಗಳ ಸುರಿಮಳೆ ಶಾಲೆಯ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಅಗ್ರ ಹತ್ತು ಸ್ಥಾನಗಳಲ್ಲಿ (Top 10) ಗುರುತಿಸಿಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ:

ವಿದ್ಯಾರ್ಥಿಯ ಹೆಸರು ಪಡೆದ ಅಂಕಗಳು ಶಾಲಾ ಮಟ್ಟದ ಸ್ಥಾನ ರಾಜ್ಯ ಮಟ್ಟದ ಸ್ಥಾನ
ಸಾತ್ವಿಕ್ ದತ್ತಾತ್ರೆಯ ಪೂಜಾರಿ 621 ಪ್ರಥಮ 5ನೇ ಸ್ಥಾನ
ನಿನಾದ ನಾಗರಾಜ ಭಟ್ 618 ದ್ವಿತೀಯ 8ನೇ ಸ್ಥಾನ
ಭುವನ್ ಎಸ್. 617 ತೃತೀಯ 9ನೇ ಸ್ಥಾನ

ಸಾಧನೆಯ ಶಿಖರಕ್ಕೇರಿದ ಪ್ರತಿಭೆಗಳು

 

ಪರೀಕ್ಷೆಗೆ ಹಾಜರಾದ ಒಟ್ಟು 69 ವಿದ್ಯಾರ್ಥಿಗಳಲ್ಲಿ, ಪ್ರತಿಯೊಬ್ಬರೂ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಶಾಲೆಯ ವಿಶೇಷತೆ. ಅಂಕಗಳ ಪಟ್ಟಿಯನ್ನು ಗಮನಿಸಿದರೆ ಈ ಶಾಲೆಯ ಶೈಕ್ಷಣಿಕ ಗಾಂಭೀರ್ಯ ಅರ್ಥವಾಗುತ್ತದೆ:

  • 95% ಕ್ಕೂ ಅಧಿಕ ಅಂಕ: 22 ವಿದ್ಯಾರ್ಥಿಗಳು

  • 90% ಕ್ಕೂ ಅಧಿಕ ಅಂಕ: 42 ವಿದ್ಯಾರ್ಥಿಗಳು

ಅಂದರೆ ಶೇ. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ 'ಡಿಸ್ಟಿಂಕ್ಷನ್' ವಿಭಾಗದಲ್ಲಿ ಮಿಂಚಿದ್ದಾರೆ.


ಗುರುವಂದನೆ ಮತ್ತು ಸಂಭ್ರಮ

 

"ವಿದ್ಯಾರ್ಥಿಗಳ ಸತತ ಪರಿಶ್ರಮ, ಶಿಕ್ಷಕರ ಸಮರ್ಪಣಾ ಮನೋಭಾವ ಹಾಗೂ ಪೋಷಕರ ಪ್ರೋತ್ಸಾಹವೇ ಈ 14 ವರ್ಷಗಳ ಅವಿರತ ಯಶಸ್ಸಿನ ಗುಟ್ಟು," ಎಂದು ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

ಶಾಲೆಯ ಈ ಐತಿಹಾಸಿಕ ಸಾಧನೆಗೆ ಸ್ಥಳೀಯರು ಹಾಗೂ ಶಿಕ್ಷಣ ಪ್ರೇಮಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸತತವಾಗಿ ನೂರಕ್ಕೆ ನೂರು ಫಲಿತಾಂಶ ನೀಡುತ್ತಿರುವ ಚಂದನ ಆಂಗ್ಲ ಮಾಧ್ಯಮ ಶಾಲೆಯು ಈಗ ರಾಜ್ಯ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ.

ಸತತ 14 ವರ್ಷದ 100% ಸಾಧನೆಗೆ ಹ್ಯಾಟ್ಸ್‌ ಆಫ್ 'ಚಂದನ' ತಂಡಕ್ಕೆ!

******

ರಾಜ್ಯಕ್ಕೆ 7 ರ್ಯಾಂಕ್ ಪಡೆದ ಸ್ಕಂದ

ಶಿರಸಿಯ ಲಯನ್ಸ್ ಶಾಲೆಯ ವಿದ್ಯಾರ್ಥಿ ಸ್ಕಂದ ಶೆಟ್ಟಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ,99.04 ಅಂಕಗಳಿಸಿ ರಾಜ್ಯಕ್ಕೆ 7 ನೇ ರ್ಯಾಂಕ್ ಗಳಿಸಿದ್ದಾನೆ.ಈ ವಿದ್ಯಾರ್ಥಿ ಕನ್ನಡ,ಹಿಂದಿ ಮತ್ತು ಸಮಾಜ ವಿಜ್ಷಾನದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದಾನೆ.ಈತ ಶಿಕ್ಷಕರಾದ ಸರ್ವೇಶ್ವರ ಶೆಟ್ಟಿ ಮತ್ತು ಶ್ರೀಮತಿ ಪ್ರಭಾವತಿ ಶೆಟ್ಟಿ ಇವರ ಪುತ್ರನಾಗಿದ್ದಾನೆ.ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ವ್ಯಕ್ತಪಡಿಸಿದೆ.

*****

ಇಖ್ರಾ ಶಿಕ್ಷಣ ಸಂಸ್ಥೆ ಶೇ,100 ಗಣನೀಯ ಸಾಧನೆ
ಶೇ. 93.44 ಅಂಕಗಳಿಸಿದ ಅಮ್ರಾ ಶಾಲೆಗೆ ಪ್ರಥಮ

ಇಖ್ರಾ ಆಂಗ್ಲ ಮಾದ್ಯಮ  ಶಾಲೆಯ ಅಮ್ರಾನಾಜ್ ಚುಡಿಗಾರ ಶೇ,93.44 ಪ್ರಥಮ,  ಮೋಸಿನಾ ಸಾಬ್ ಶೇ,90.4 ದ್ವಿತೀಯ ಹಾಗು  ಆಯೇಷಾ ಸಿದ್ಧಿಕಾ ಪಟ್ಟೇಗಾರ ಶೇ.86.24 ಅಂಕ ಪಡೆದು ಶಾಲೆಗೆ ತ್ರತೀಯ ಸ್ಥಾನಗಳಿಸಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಇಖ್ರಾ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಖುದ್ದುಸ್ ಹಸನ್ ಸಾಬ್ ,ಉಪಾಧ್ಯಕ್ಷರಾದ ಜನಾಬ್ ನಾಸಿರ್ ಖಾನ್ ಕಾರ್ಯದರ್ಶಿಗಳಾದ ಜನಾಬ್ ಅಬ್ಬಾಸ್ ತೊನ್ಸೆ ಹಾಗು ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಅಲಹುದಾಖಾನ ಹಾಗು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

 


What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0