ಅಬಾಕಸ್‌ನ ಸ್ಪರ್ಧೆಯಲ್ಲಿ ಶಿರಸಿ ಮಕ್ಕಳ ಸಾಧನೆ

Nov 7, 2025 - 21:35
 0  73
ಅಬಾಕಸ್‌ನ ಸ್ಪರ್ಧೆಯಲ್ಲಿ ಶಿರಸಿ ಮಕ್ಕಳ ಸಾಧನೆ

ಆಪ್ತ ನ್ಯೂಸ್ ಶಿರಸಿ:

ಮೂಡಬಿದರೆ ಆಳ್ವಾಸ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಅಬಾಕಸ್‌ನ ಸ್ಪರ್ಧೆಯಲ್ಲಿ ಶಿರಸಿ-ಐಡಿಯಲ್ ಪ್ಲೇ ಅಬಾಕಸ್‌ನ ಮಕ್ಕಳು ಭಾಗವಹಿಸಿ ಸಮಗ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರಥಮ ರ‍್ಯಾಂಕ್‌ನ್ನು ಅಜೀನ್ ಅಪ್ಜಲ್ ಖಾನ್, ರೆಯಾಂಶ ಕೆ. ನೀರಲಗಿ, ದ್ರುವಾ ಎಸ್. ಎ, ದ್ವಿತೀಯ ರ‍್ಯಾಂಕ್‌ನ್ನು ಶ್ರೇಯಾ ಎಮ್ ಶೆಟ್ಟಿ, ಹಾರಿತ್ ಖಾನ್ ಐರಣಿ, ಸಾತ್ವಿಕ್ ಜೆ ಹೆಚ್, ಆರಿಧ್ಯ ವಿ ಶೆಟ್ಟಿ, ಪ್ರತೀಕ್ ಪಿ. ಶೆಟ್ಟಿ, ತೃತೀಯ ರ‍್ಯಾಂಕ್‌ನ್ನು ಸಾತ್ವಿಕ್ ಕೆ. ಭಟ್ಟ, ರಹಲ್ ಆರ್. ಪೂಜಾರಿ, ಅಬ್ದುಲ್ ರೆಹಮಾನ್ ಶುಂಟಿ, ನಿಝಾ ಪಠಾಣ, ಚಿರಾಯು ಎಸ್. ಜಿ, ವಿಭಾ ಎಮ್. ನಾಯ್ಕ, ಚತುರ್ಥ ರ‍್ಯಾಂಕ್‌ನ್ನು ಚಿರಾಗ ಎಸ್. ಜಿ, ಗಣೇಶ್ವರ ಆರ್. ಪಿ, ಅಂಚಿತ್ಯಾ ಎ. ಜಿ, ಹೇಮಂತ ಸಿ. ನಡಗಿ ಹಾಗೂ ಪಂಚಮ ರ‍್ಯಾಂಕ್‌ನ್ನು ಸಿಂಧು ಹೆಚ್, ಪರಿಣಿತಾ ಪಿ. ಜನ್ನು, ಅದ್ವಯ ಎಮ್. ಹರಗಿ, ಮಹಮ್ಮದ ಆಹಿಲ್, ಅಲೀನಾ ಖಾನುಮ್ ಮೊಹಸಿನ ಖಾನ್, ಅಲೀಜಾ ಖಾನುಮ್ ಮೊಹಸಿನ್ ಖಾನ್, ಸಮರ್ಥ ಎಮ್ ಪಿ, ಇಫ್ರಾ ಆಶ್ಫಾಕ್ ಶೇಖ್ ಪಡೆದಿದ್ದಾರೆ. 

ಶಿರಸಿ ಸೆಂಟರಿನಲ್ಲಿ “ಇಂಟರ್‌ನ್ಯಾಶನಲ್ ಗ್ರೇಡಿಂಗ್” ಪರೀಕ್ಷೆಯಲ್ಲಿ ೨೮ ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ ಔಟ್‌ಸ್ಟಾಂಡಿAಗ್ ೧೩ ಮಕ್ಕಳು, ಡಿಸ್ಟಿಂಕ್ಷನ್ ೫ ಮಕ್ಕಳು ಹಾಗೂ ಮೆರಿಟ್‌ನ್ನು ೧೦ ಮಕ್ಕಳು ಪಡೆದಿದ್ದಾರೆ. ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಕಿಯರಾದ ವರ್ಷಾ ಪಿ. ಹಂದ್ರಾಳ ಮತ್ತು ರೂಪಾ ಶೆಟ್ಟರ ಹರ್ಷ ವ್ಯಕ್ತ ಪಡಿಸಿದ್ದಾರೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0