ಗೋಪಾಲ ಜೀ ನಾಗರಕಟ್ಟೆ ಅವರನ್ನು ಸನ್ಮಾನಿಸಿದ ಎಸ್.ಎಲ್.ಘೋಟ್ನೇಕರ
ಆಪ್ತ ನ್ಯೂಸ್ ಶಿರಸಿ :
ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಂಘ ಶತಾಬ್ದಿ ನಿಮಿತ್ತ ಪಥಸಂಚಲನ ಹಾಗೂ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತೀಯ ಕಾರ್ಯದರ್ಶಿಗಳಾದ ಗೋಪಾಲ ಜೀ ನಾಗರಕಟ್ಟೆ ಅವರನ್ನು ಮಾಜಿ ವಿ.ಪ ಸದಸ್ಯರು, ಬಿಜೆಪಿ ನಾಯಕರು, ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಎಸ್.ಎಲ್.ಘೋಟ್ನೇಕರ ಅವರು ಭೇಟಿಯಾಗಿ ಸನ್ಮಾನಿಸಿ, ಗೌರವಿಸಿದರು.
ಈ ವೇಳೆ ಇಂದು ನಡೆದ ಜಿಲ್ಲೆಯ ಪ್ರತಿಷ್ಠಿತ ಕೆ.ಡಿ.ಸಿ.ಸಿ ಬ್ಯಾಂಕ್ ನ ಚುನಾವಣೆಯಲ್ಲಿ ಎಸ್ ಎಲ್ ಘೋಟ್ನೇಕರ ಅವರು ಸತತ 7ನೇ ಬಾರಿಗೆ ವಿಜಯ ಸಾಧಿಸಿ ನಿರ್ದೇಶಕರಾದ ಕಾರಣವಾಗಿ ಗೋಪಾಲ ಜೀ ಅವರು ಸಿಹಿ ತಿನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕರಾದ ಶ್ರೀನಿವಾಸ ಘೋಟ್ನೇಕರ, ಜಿಲ್ಲಾ ವಿಶೇಷ ಆಹ್ವಾನಿತರಾದ ಅನಿಲ್ ಮುತ್ನಾಳೆ, ಪ್ರಮುಖರಾದ ವಿಜಯ ಬೋಬಾಟಿ, ಶಿವದೇವ ದೇಸಾಯಿ, ಯತಿರಾಜ್ ಶೆಟ್ಟಿ, ಮೊದಲಾದವರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



