ಅರಬೈಲ್ ಘಟ್ಟದಲ್ಲಿ ಬೆಂಕಿಗಾಹುತಿಯಾದ ಸ್ಪಿರಿಟ್ ಲಾರಿ
ಆಪ್ತ ನ್ಯೂಸ್ ಯಲ್ಲಾಪುರ:
ಸ್ಪಿರೀಟ್ ತುಂಬಿ ಲಾರಿಯೊಂದು ಮರವೊಂದಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿ ಉರಿದ ಘಟನೆ ಯಲ್ಲಾಪುರ ತಾಲೂಕಿನ ರಾ.ಹೆದ್ದಾರಿ ೬೩ ರ ಅರಬೈಲ್ ಬಳಿಯ ಮಾರುತಿ ದೇವಸ್ಥಾನದ ಎದುರು ಶನಿವಾರ ಬೆಳಿಗ್ಗೆನ ಜಾವ ಸಂಭವಿಸಿದೆ.
ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಚಲಿಸುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿನ ಮರಕ್ಕೆ ಡಿಕ್ಕಿ ಹೊಡೆಯಿತು. ಆ ವೇಳೆ ನಡೆದ ಘರ್ಷಣೆಗೆ ಬೆಂಕಿ ಹೊತ್ತಿಕೊಂಡಿತೆನ್ನಲಾಗಿದೆ.ಲಾರಿಯ ಚಾಲಕ ಹಾರಿ ಪ್ರಾಣವನ್ನು ಉಳಿಸಿಕೊಂಡಿದ್ದಾನೆ.
ದೊಡ್ಡದಾಗಿ ಉರಿದು ನಂತರ ಸ್ಪಿರಿಟ್ ಹೊರಬಂದು ಬೆಂಕಿಯ ರೌದ್ರಾವತಾರ ಆಯಿತು.ಕಿಡಿ ದೊಡ್ಡ ಜ್ವಾಲೆಯಾಯಿತು. ಕ್ಷಣಮಾತ್ರದಲ್ಲಿ ಇಡೀ ಟ್ಯಾಂಕರ್ ಹೊತ್ತಿ ಉರಿಯಿತು.ಟ್ಯಾಂಕರಿಗೆ ಬೆಂಕಿ ಬಿದ್ದ ವಿಷಯ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿಮತ್ತು ಪೋಲಿಸರು ಸ್ಥಳಕ್ಕೆ ತೆರಳಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



