ಸಂಕಲ್ಪದಲ್ಲಿ ಅಧ್ಯಾತ್ಮ ಸಾರುವ ವೈವಿಧ್ಯ ಕಾರ್ಯ ನಡೆದಿದೆ: ಡಾ. ವಿಶ್ವಸಂತೋಷ ಭಾರತೀ
ಆಪ್ತ ನ್ಯೂಸ್ ಯಲ್ಲಾಪುರ:
ಸಂಕಲ್ಪದಲ್ಲಿ ಅಧ್ಯಾತ್ಮ ಸಾರುವ ವೈವಿಧ್ಯ ಕಾರ್ಯವನ್ನು ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿ ಎಂದು ಬಾರಕೂರ ಮಹಾ ಸಂಸ್ಥಾನದ ವಿದ್ಯಾವಾಚಸ್ಪತಿ ಡಾ.ವಿಶ್ವಸಂತೋಷ ಭಾರತೀ ಶ್ರೀಪಾದರು ನುಡಿದರು.
ಅವರು ಶನಿವಾರ ಗಾಂಧೀ ಕುಠಿರದಲ್ಲಿ ಎರಡನೇ ದಿನದ ಸಂಕಲ್ಪೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಈ ಸಂಕಲ್ಪದಲ್ಲಿ ಯಕ್ಷಗಾನಕ್ಕೆ ಒತ್ತು ನೀಡುವ ಮೂಲಕ ಸಂಸ್ಕೃತಿ ಉಳಿಸುವ ಬೆಳೆಸುವ ಪ್ರಯತ್ನವಾಗಿದೆ ಎಂದ ಅವರು ಹಿಂದೂಗಳಾಗಿ ಸುಮ್ಮನೇ ಕೂರುವವರು ನಾವಾಗಬಾರದು ಎಂದು ನುಡಿದರು.
ವೇದಿಕೆಯಲ್ಲಿ ಎಂ.ಎಲ್.ಸಿ ಶಾಂತಾರಾಮ ಸಿದ್ದಿ, ವಿಶ್ವದರ್ಶನ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಪಹರೆ ವೇದಿಕೆಯ ನಾಗರಾಜ ನಾಯಕ ಕಾರವಾರ, ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ, ಲೋಕದ್ವನಿ ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಗಾರ, ತತ್ವನಿಷ್ಠ ಸಂಪಾದಕ ಪ್ರವೀಣ, ಮದನೂರು ಸೊಸೈಟಿ ಅಧ್ಯಕ್ಷ ಮಹೇಶ ದೇಸಾಯಿ, ಪ್ರಮುಖರಾದ ಸದಾನಂದ ಭಟ್ಟ ಹಲವಳ್ಳಿ, ಉದ್ಯಮಿ ಬಸವರಾಜ ಓಶೀಮಠ ಉಪಸ್ಥಿತರಿದ್ದರು.
ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಶಿಕ್ಷಕಿ ಯಮುನಾ ನಾಯ್ಕ್, ಕೃಷಿ ಕ್ಷೇತ್ರದ ಸಾಧನೆಗಾಗಿ ಕಲ್ಲಪ್ಪ ಕೆ ನಾಯ್ಕ್ ಕಲಕರಡಿ ಇವರಿಗೆ ಸಂಕಲ್ಪ ಪ್ರಶಸ್ತಿಯನ್ನು ಶ್ರೀಪಾದರು ಪ್ರಧಾನ ಮಾಡಿದರು.
ಇದೇ ಸಂದರ್ಭದಲ್ಲಿ ಕುಮಾರ ತೇಜಸ್ವೀ ಗಾಂವ್ಕಾರ ಹೆಗ್ಗಾರ್ ರಚಿಸಿದ ಹೃದಯದ ಮಾತು ಕೇಳು ನನ್ನ ಒಲವೇ ಕಾದಂಬರಿ ಪುಸ್ತಕವನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಪ್ರಾಸ್ತಾವಿಕಗೈದರು. ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಎಸ್ ಕಾರ್ಯಕ್ರಮ ನಿರ್ವಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



