ಅಡ್ಕಳ್ಳಿ ಪ್ರದೇಶದಲ್ಲಿ ಸೀಳುನಾಯಿಗಳ ಹಾವಳಿ: ವಿಡಿಯೋ ವೈರಲ್
ಆಪ್ತ ನ್ಯೂಸ್ ಕಾನಸೂರು:
ಕಾನಸೂರು ಪಂಚಾಯತ್ ವ್ಯಾಪ್ತಿಯ ಅಡ್ಕಳ್ಳಿ-ಮುತ್ಮುರ್ದು-ದಂಟಕಲ್ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸೀಳು ನಾಯಿಗಳ ಹಾವಳಿ ತೀವ್ರವಾಗಿದೆ. ಈ ಪ್ರದೇಶದ ಕಾಡುಗಳಲ್ಲಿ ಬೀಡು ಬಿಟ್ಟಿರುವ ಸೀಳು ನಾಯಿಗಳ ದಂಡು ಇಂದು ವ್ಲಾಗರ್ ರವಿಚಂದ್ರ ಹೆಗಡೆ ಅವರ ಎದುರು ಕಾಣಿಸಿಕೊಂಡಿತ್ತು. ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಕಾನಸೂರು ಮೂಲಕ ಅಡ್ಕಳ್ಳಿ ಕಡೆಗೆ ಕಾರಿನ ಮೂಲಕ ತೆರಳುತ್ತಿದ್ದ ವೇಳೆ ರಸ್ತೆ ಪಕ್ಕದ ಬೆಟ್ಟದಲ್ಲಿ ನಾಯಿಗಳಂತಹ ಪ್ರಾಣಿಗಳು ಕಾಣಿಸಿಕೊಂಡವು. ನಾಯಿಗಿಂತ ಕೊಂಚ ಭಿನ್ನವಾಗಿದ್ದ ಇವುಗಳನ್ನು ಕಂಡ ರವಿಚಂದ್ರ ಹೆಗಡೆ ಕುತೂಹಲದಿಂದ ಗಡಿ ನಿಲ್ಲಿಸಿ ವಿಡಿಯೋ ಮಾಡಿಕೊಂಡರು. ಸ್ಥಳೀಯರ ಬಳಿ ಕೇಳಿದಾಗ ಇವುಗಳು ಸೀಳುನಾಯಿಗಳ ಹಿಂಡು ಎನ್ನುವ ಮಾಹಿತಿ ನೀಡಿದರು. ರವಿಚಂದ್ರ ಹೆಗಡೆ ಅವರು ಮಾಡಿದ ವಿಡಿಯೋ ಇಲ್ಲಿದೆ ನೋಡಿ
link:
https://www.instagram.com/reel/DQQ65EYEpCf/?igsh=NXB1ZXFsYnA5OW4w
ಸೀಳು ನಾಯಿಗಳ ಕುರಿತು ಕೊಂಚ ಮಾಹಿತಿ ಇಲ್ಲಿದೆ ನೋಡಿ
ಇವು ಕಾಡಿನಲ್ಲಿರುವ ನಾಯಿಗಳು. ಗುಂಪಾಗಿಯೇ ವಾಸಿಸುವ ಇವು ಬೇಟೆಯಲ್ಲಿ ಶೂರರು! ಕಾಡು ಪ್ರಾಣಿಗಳನ್ನು ಗುಂಪಾಗಿಯೇ ಬೇಟೆಯಾಡಿ ಜೀವ ಇರುವಾಗಲೇ ಹರಿದು ತಿನ್ನುತ್ತವೆ. ಆದರೆ ಮನುಷ್ಯರಿಗೆ ಹಾಗೂ ಜಾನುವಾರುಗಳಿಗೆ ಯಾವುದೇ ಅಪಾಯ ಮಾಡಿದ ಉದಾಹರಣೆ ಇಲ್ಲ. ಊರ ನಾಯಿ ಜೊತೆ ಸೇರದ ಇವು ಅವುಗಳಿಗೂ ಅಪಾಯ ಮಾಡಿದ್ದಿಲ್ಲ. ಮೊಲ, ಹಂದಿ, ಕುರಿ ಜಿಂಕೆಯಂತಹ ಕಾಡುಪ್ರಾಣಿಗಳು ಇವರ ಬೇಟೆಯ ಮುಖ್ಯ ಆಹಾರಗಳು.
ಭಾರತ ಸೇರಿದಂತೆ ಏಶ್ಯಾದ ಕೆಲವೇ ದೇಶದಲ್ಲಿ ಅಪರೂಪವಾಗಿ ಕಂಡುಬರುವ ಈ ಸೀಳುನಾಯಿಗಳು ಅಳಿವಿನ ಅಂಚಿನಲ್ಲಿರುವ ಪ್ರಾಣಿ ಪ್ರಭೇದಕ್ಕೆ ಸೇರಿರುವುದು ಸಹ ಆತಂಕದ ವಿಚಾರವಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



