ದೇಶವನ್ನು ಉನ್ನತಿಗೆ ಒಯ್ಯುವ ನಿಟ್ಟಿನಲ್ಲಿ ಚಿಂತನೆ ಅಗತ್ಯ: ಸುಧಾಕರ

Nov 10, 2025 - 11:39
 0  28
ದೇಶವನ್ನು ಉನ್ನತಿಗೆ ಒಯ್ಯುವ ನಿಟ್ಟಿನಲ್ಲಿ ಚಿಂತನೆ ಅಗತ್ಯ: ಸುಧಾಕರ

ಆಪ್ತ ನ್ಯೂಸ್‌ ಯಲ್ಲಾಪುರ:

ರಾ.ಸ್ವ.ಸಂಘಕ್ಕೆ ನೂರು ತುಂಬಿದ ಹರ್ಷ ನಮಗೆ.ಈ ಸಂದರ್ಭದಲ್ಲಿ ದೇಶದ ಬಗೆಗೆ ತಿಳಿಸುವ ಪ್ರಯತ್ನ ಮಾಡುತ್ತ ದೇಶವನ್ನು ಉನ್ನತಿಗೆ ಒಯ್ಯುವದರ ಬಗ್ಗೆ ಯೋಚಿಸೋಣ ಎಂದು ಹಿಂದೂ ಸೇವಾ ಪ್ರತಿಷ್ಠಾನದ ಸಂಚಾಲಕ ಸುಧಾಕರ ಹೇಳಿದರು.
ಅವರು ರವಿವಾರ ಪಟ್ಟಣದ ವೈಟಿಎಸ್ಸೆಸ್ ಮೈದಾನದಲ್ಲಿ ರಾ.ಸ್ವ.ಸಂಘ ಯಲ್ಲಾಪುರ ತಾಲೂಕು ಹಮ್ಮಿಕೊಂಡಿದ್ದ ಶತಾಬ್ದಿ ಸಂಚಲನ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ವಿಶೇಷ ಬೌಧ್ದಿಕ ನೀಡಿದರು.ಸಂಘದ ಸಂಘಟನೆಯ ಶಕ್ತಿ ಇರುವುದೇ ಶಾಖೆಯಲ್ಲಿ.ಈ ಶಾಖೆ ನಿತ್ಯ ನಿರಂತರವಾಗಬೇಕು. ವಿಶೇಷ ಕಾರ್ಯಪಧ್ದತಿಯ ಮೂಲಕ ಸಂಘ ಬೆಳೆಯುತ್ತದೆ.
ಹಿಂದೂ ಸಮಾಜಕ್ಕೆ ಶಕ್ತಿಯನ್ನು  ಕೊಡುವ ಕೆಲಸ ಸಂಘ ಮಾಡುತ್ತಿದೆ.ದೇಶದ ರಕ್ಷಣೆಯಲ್ಲೂ ಸಂಘ ತನ್ನ ಪಾತ್ರ ನಿರ್ವಹಿಸುತ್ತದೆ.ಸಂಘ ತನ್ನ ಶಕ್ತಿಯನ್ನು ಅಯೋಧ್ಯೆಯಂತಹ ವಿಷಯದಲ್ಲಿ ಕಾಣಿಸಿದೆ.ಸಂಘ ವಿಭಿನ್ನ ಕಾರ್ಯದ ಮೂಲಕ ಹೆಜ್ಜೆಯಿಡುತ್ತಾ ಬಂತು.ಜಾತೀಯತೆಯನ್ನು ತೊಲಗಿಸಲು ಸಂಘ ಮುಂದಡಿಯಿಡುತ್ತ  ಸಂಘದ ವಿಚಾರಧಾರೆಯನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡುತ್ತಾ ಇದೆ.ಸಂಘ ನಾಡು ನುಡಿ, ನೆಲ ಜಲ,ಶಿಕ್ಷಣ,ಯೋಗ,ಆರೋಗ್ಯ,ಎಲ್ಲ ಸಂಗತಿಗಳಲ್ಲೂ ದುಡಿಯುತ್ತಿದೆ.ಸಂಘ ಪರಿವಾರದ ಮೂಲಕ ಬೇರೆ ಬೇರೆ ಕೆಲಸಗಳಲ್ಲಿ ಸೇವಾ ಚಟುವಟಿಕೆ ಮಾಡುತ್ತಿದೆ.ಇವತ್ತಿನ ಲವ್,ಜಿಹಾದ್,ಮತಾಂತರಗಳಿಗೆ ಪ್ರತ್ಯುತ್ತರ ನೀಡುವದಕ್ಕೆ ಸನ್ನದ್ದರಾಗಬೇಕು ಎಂದರು.ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಸವಿತಾ ಸಮಾಜದ ಅಧ್ಯಕ್ಷ ನಾಗರಾಜ ಯಾಮಕೆ ಮಾತನಾಡಿ,ಭಾರತದ ಏಳಿಗೆಗೆ ಜೀವನವನ್ನು ತ್ಯಾಗ ಮಾಡಿದವರು ರಾ.ಸ್ವ. ಸಂಘದವರು.ದೇಶಭಕ್ತಿಯ ವಿಷಯದಲ್ಲಿ ಸಂಘ ಜಾತಿ ಧರ್ಮ ನೋಡಿಲ್ಲ.ಸವಾಲುಗಳನ್ನು ಎದುರಿಸುವುದನ್ನು ಕಲಿಸಿಕೊಟ್ಟಿದೆ.ದೇಶಕ್ಕಾಗಿ ಕೆಲಸ ಮಾಡುವುದನ್ನು ರಾ.ಸ್ವ.ಸಂಘ ನಮಗೆ ಕಲಿಸಿದೆ.ರಾಷ್ಟ್ರದ ಏಕತೆಗಾಗಿ ಕೆಲಸ ಮಾಡುವ ಏಕೈಕ ಸಂಘಟನೆ ರಾ ಸ್ವ ಸಂಘ. ಸಂಘದ ಸ್ವಯಂಸೇವಕ ಎಂದು ಹೇಳಿಕೊಳ್ಳುವಂಥವರು ನಾವಾಗಬೇಕು ಎಂದರು.
ಗಣೇಶ ನೆರ್ಲೆಮನೆ ವೈಯಕ್ತಿಕ ಗೀತೆ ಪಠಿಸಿದರು.ತಾಲೂಕಾ ಕಾರ್ಯವಾಹ ರಾಘವೇಂದ್ರ ಧೂಳಿ  ಸ್ವಾಗತಿಸಿದರು.ವೆಂಕಟೇಶ ಗೇರಗದ್ದೆ ಕಾರ್ಯಕ್ರಮ ನಿರ್ವಹಿಸಿದರು.ತಾಲೂಕು ಸಹಕಾರ್ಯವಾಹ ಮಂಜುನಾಥ ಹಿರೇಮಠ ವಂದಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0