ದೈತ್ಯ ಹಾರುವ ಬೆಕ್ಕನ್ನು ರಕ್ಷಿಸಿದ ಸುನೀಲ್‌ ಹೊನ್ನಾವರ

Jan 5, 2026 - 13:19
 0  124
ದೈತ್ಯ ಹಾರುವ ಬೆಕ್ಕನ್ನು ರಕ್ಷಿಸಿದ ಸುನೀಲ್‌ ಹೊನ್ನಾವರ

ಆಪ್ತ ನ್ಯೂಸ್ ಮುಂಡಗೋಡ:

 ಅರಣ್ಯ ಇಲಾಖೆ ನಡೆಸಿದ ಗಸ್ತು ಕಾರ್ಯಾಚರಣೆ ವೇಳೆ ಅಪರೂಪದ ದೈತ್ಯ ಹಾರುಬೆಕ್ಕು (Giant Flying Squirrel) ಕಾಣಿಸಿಕೊಂಡಿದ್ದು, ಗಾಯಗೊಂಡ ಹಾರುಬೆಕ್ಕನ್ನು ಅರಣ್ಯಾಧಿಕಾರಿ ಸುನೀಲ್‌ ಹೊನ್ನಾವರ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕಾತೂರ ಉಪ ವಲಯ ಅರಣ್ಯಾಧಿಕಾರಿ ಸುನೀಲ ಹೊನ್ನಾವರ ಪಾಳಾ ಅವರ ನೇತೃತ್ವದಲ್ಲಿ, ಕಾಳ ಭೈರವ ತಂಡದೊಂದಿಗೆ ಕಚೇರಿ ವಾಹನದಲ್ಲಿ ರಾತ್ರಿ ಗಸ್ತು ಸಂಚರಿಸುತ್ತಿದ್ದ ವೇಳೆ ಶಿರಸಿ–ಕೋಡಂಬಿ ರಸ್ತೆಯ ಮಧ್ಯಭಾಗದಲ್ಲಿ ಅನಾರೋಗ್ಯದಿಂದ ಬಳಲುತ್ತ ಒದ್ದಾಡುತ್ತಿದ್ದ ಹಾರುಬೆಕ್ಕು ಕಾಣಿಸಿಕೊಂಡಿತ್ತು.

ಮಲೆನಾಡು ಭಾಗದಲ್ಲಿ “ಹಾರುವ ಬೆಕ್ಕು” ಎಂದು ಕರೆಯಲಾಗುವ ಈ ದೈತ್ಯ ಹಾರುವ ಅಳಿಲು, ಅಪರೂಪದ ಹಾಗೂ ಪರಿಸರದ ಸಮತೋಲನಕ್ಕೆ ಮುಖ್ಯವಾದ ಜೀವಿಯಾಗಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಅರಣ್ಯ ಅಧಿಕಾರಿಗಳು ಪ್ರಾಣಿಯನ್ನು ರಕ್ಷಿಸಿದರು.

ಪ್ರಾಥಮಿಕ ಪರಿಶೀಲನೆ ನಡೆಸಿದ ಬಳಿಕ, ಆ ಹಾರುವ ಬೆಕ್ಕನ್ನು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಯಿತು. ಈ ಮಾನವೀಯ ಕಾರ್ಯಾಚರಣೆಯಲ್ಲಿ ಅರಣ್ಯ ವೀಕ್ಷಕ ಬಸವರಾಜ ವಾಲ್ಮೀಕಿ ಹಾಗೂ ವಾಹನ ಚಾಲಕ ಕೃಷ್ಣ ಅವರು ಅರಣ್ಯಾಧಿಕಾರಿಗಳೊಂದಿಗೆ ಕೈಜೋಡಿಸಿದ್ದರು.

 ವನ್ಯಜೀವಿ ಸಂರಕ್ಷಣೆಯತ್ತ ಅರಣ್ಯ ಇಲಾಖೆಯ ಈ ಕ್ರಮ, ಪರಿಸರ ಜಾಗೃತಿಗೆ ಮತ್ತೊಂದು ಉತ್ತಮ ಉದಾಹರಣೆಯಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0